ಅರುಣಾಚಲ ಪ್ರದೇಶದ 15 ಸ್ಥಳಗಳನ್ನು ತನ್ನ ನಕ್ಷೆಯಲ್ಲಿ ಮರುನಾಮಕರಣ ಮಾಡಿದ ನಂತರ ಭಾರತ, ಚೀನಾವನ್ನು ತರಾಟೆಗೆ ತೆಗೆದುಕೊಂಡಿದೆ. ಚೀನಾದ ಮರುನಾಮಕರಣದ ಕ್ರಮಕ್ಕೆ ಬಲವಾಗಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ, ಈ ಸ್ಥಳಕ್ಕೆ ಹೊಸ ಚೀನಿ ಹೆಸರುಗಳನ್ನ ಇಡುವುದರಿಂದ ಈ ಸತ್ಯ ಬದಲಾಗುವುದಿಲ್ಲ ಎಂದು ಹೇಳಿದೆ.
ಚೀನಾದ ನಕ್ಷೆಗಳಲ್ಲಿ ಬಳಸಲು ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ‘ಪ್ರಮಾಣೀಕೃತ’ ಹೆಸರುಗಳನ್ನು ನೀಡಿದ್ದೇವೆ ಎಂದು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದ ನಂತರ ಭಾರತ ಚೀನಾದ ನಡೆಯನ್ನ ಖಂಡಿಸಿದೆ.
ಅರುಣಾಚಲ ಪ್ರದೇಶದ ಸ್ಥಳಗಳ ಹೆಸರನ್ನು ಚೀನಾ ಮರುನಾಮಕರಣ ಮಾಡಿರುವುದು ಇದೆ ಮೊದಲೇನಲ್ಲ. 2017ರಲ್ಲಿ ಚೀನಾ ಆರು ಸ್ಥಳಗಳ ಹೆಸರನ್ನು ಬದಲಾಯಿಸಿತ್ತು.