alex Certify BIG BREAKING: ವಿಶ್ವದಲ್ಲೇ 6 ನೇ ಒಂದು ಭಾಗ ಜನ ಇರುವ ಅತಿದೊಡ್ಡ ದೇಶ ಚೀನಾದಲ್ಲಿ ಜನಸಂಖ್ಯೆ 60 ವರ್ಷದಲ್ಲೇ ಮೊದಲ ಬಾರಿ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ವಿಶ್ವದಲ್ಲೇ 6 ನೇ ಒಂದು ಭಾಗ ಜನ ಇರುವ ಅತಿದೊಡ್ಡ ದೇಶ ಚೀನಾದಲ್ಲಿ ಜನಸಂಖ್ಯೆ 60 ವರ್ಷದಲ್ಲೇ ಮೊದಲ ಬಾರಿ ಕುಸಿತ

ಬೀಜಿಂಗ್: ಚೀನಾ ಜನಸಂಖ್ಯೆ 60 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆ ಹಾದಿಯಲ್ಲಿದೆ. ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಚೀನಾ ಹೊಂದಿದೆ. ವಿಶ್ವದ ಅತಿದೊಡ್ಡ ರಾಷ್ಟ್ರದ ಜನಸಂಖ್ಯೆ ಕುಗ್ಗಲಿದೆ ಎಂದು ಹೇಳಲಾಗಿದೆ.

4 ದಶಕಗಳಲ್ಲಿ ಚೀನಾದ ಜನಸಂಖ್ಯೆಯು 660 ದಶಲಕ್ಷದಿಂದ 1.4 ಶತಕೋಟಿಗೆ ಏರಿದ ನಂತರ, ಅದರ ಜನಸಂಖ್ಯೆಯು ಈ ವರ್ಷ ಇಳಿಕೆ ಹಾದಿಯಲ್ಲಿದೆ, 1959-1961ರ ಮಹಾ ಕ್ಷಾಮದ ನಂತರ ಮೊದಲ ಬಾರಿಗೆ ಚೀನಾ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿದೆ.

ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚೀನಾದ ಜನಸಂಖ್ಯೆಯು 1.41212 ಬಿಲಿಯನ್ ನಿಂದ ಕೇವಲ 1.41260 ಬಿಲಿಯನ್ ಗೆ ಏರಿದೆ. ಇದು ಕೇವಲ 4,80,000 ರಷ್ಟು ಕಡಿಮೆ ಹೆಚ್ಚಳ ದಾಖಲಿಸಿದೆ. ಒಂದು ದಶಕದ ಹಿಂದೆ 8 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ವಾರ್ಷಿಕ ಬೆಳವಣಿಗೆ ಇತ್ತು.

ಕಟ್ಟುನಿಟ್ಟಾದ ಕೋವಿಡ್ ವಿರೋಧಿ ಕ್ರಮಗಳ ಹಿನ್ನೆಲೆಯಲ್ಲಿ ಮಕ್ಕಳನ್ನು ಹೊಂದಲು ಹಿಂಜರಿಯುವುದು ಜನನಗಳ ಕುಸಿತಕ್ಕೆ ಕಾರಣವಾಗಿರಬಹುದು. ಚೀನಾ 2016 ರಲ್ಲಿ ತನ್ನ ಒಂದು ಮಕ್ಕಳ ನೀತಿಯನ್ನು ಕೈಬಿಟ್ಟು, ಕಳೆದ ವರ್ಷ ತೆರಿಗೆ ಮತ್ತು ಇತರ ಪ್ರೋತ್ಸಾಹಕಗಳ ಬೆಂಬಲದೊಂದಿಗೆ ಮೂರು-ಮಕ್ಕಳ ನೀತಿಯನ್ನು ಪರಿಚಯಿಸಿದರೂ ಜನಸಂಖ್ಯೆ ಕುಸಿತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...