ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ದುಪ್ಪಟ್ಟು ಮಾಡಿಕೊಂಡಿರುವ ಚೀನಾವು ಅಮೆರಿಕವನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ.
ಮೆಕ್ಕಿನ್ಸೆ & ಕೋ ಕನ್ಸಲ್ಟೆಂಟ್ಸ್ ಸಂಶೋಧನಾ ವರದಿಯು ಈ ಮಾಹಿತಿಯನ್ನು ನೀಡಿದೆ. ಕಳೆದ ಎರಡು ದಶಕಗಳಲ್ಲಿ ಚೀನಾದ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ.
ಈ ವರದಿಯು ವಿಶ್ವದ ಆದಾಯದ 60 ಪ್ರತಿಶತಕ್ಕಿಂತ ಹೆಚ್ಚು ಪ್ರತಿನಿಧಿಸುವ ಹತ್ತು ದೇಶಗಳ ಬ್ಯಾಲೆನ್ಸ್ ಶೀಟ್ಗಳನ್ನು ಪರಿಶೀಲಿಸಿದೆ.
ನಾವು ಹಿಂದೆಂದಿಗಿಂತಲೂ ಹೆಚ್ಚು ಶ್ರೀಮಂತರಾಗಿದ್ದೇವೆ ಎಂದು ಜ್ಯೂರಿಚ್ನ ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ನ ಸಹಭಾಗಿ ಜಾನ್ ಮಿಶ್ಕೆ ಸಂದರ್ಶನದಲ್ಲಿ ಹೇಳಿದ್ದಾರೆ. ಅಧ್ಯಯನದ ಪ್ರಕಾರ ವಿಶ್ವಾದ್ಯಂತ ನಿವ್ವಳ ಮೌಲ್ಯವು 2020ರಲ್ಲಿ 514 ಲಕ್ಷ ಕೋಟಿ ಡಾಲರ್ಗೆ ಏರಿಕೆಯಾಗಿದೆ. 2000ನೇ ಇಸ್ವಿಯಲ್ಲಿ ಈ ಪ್ರಮಾಣ 156 ಲಕ್ಷ ಕೋಟಿ ಡಾಲರ್ ಆಗಿತ್ತು. ಈ ಏರಿಕೆಯಲ್ಲಿ ಚೀನಾದ ಪಾಲು ಮೂರರಲ್ಲಿ ಒಂದು ಭಾಗವಾಗಿದೆ..!
2000ನೇ ಇಸ್ವಿಯಲ್ಲಿ ಚೀನಾ ವಿಶ್ವ ವಾಣಿಜ್ಯ ಸಂಸ್ಥೆಗೆ ಸೇರ್ಪಡೆಗೊಳ್ಳುವ ಮುನ್ನ 7 ಲಕ್ಷ ಕೋಟಿ ಇದ್ದ ಚೀನಾದ ಆದಾಯವು 20 ವರ್ಷಗಳಲ್ಲಿ ಬರೋಬ್ಬರಿ 120 ಲಕ್ಷ ಕೋಟಿ ಡಾಲರ್ ಆಗಿದೆ.