ಪ್ರೀತಿಯು ಸುಂದರವಾಗಿದ್ದರೂ, ವಿಘಟನೆಯು ಅಷ್ಟೇ ನೋವಿನಿಂದ ಕೂಡಿದೆ ಮತ್ತು ಅದರ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ. ನಿಮ್ಮ ಪ್ರೀತಿಗೆ ಅಂಟಿಕೊಂಡಿರುವ ನೆನಪುಗಳನ್ನು ಬಿಡುವುದು ಕಷ್ಟ ಮತ್ತು ಒಂಟಿತನವು ಸಂಕಟದಂತೆ ಭಾಸವಾಗುತ್ತದೆ.
ಇತ್ತೀಚಿಗೆ, ಚೀನಾದಲ್ಲಿ ಒಬ್ಬ ವ್ಯಕ್ತಿ ತನ್ನ ಗೆಳತಿ ಬಿಟ್ಟು ಹೋದರೂ ಆತ ತನ್ನ ಪ್ರೀತಿಯನ್ನು ಬಿಡಲು ಸಿದ್ಧವಿರರಲಿಲ್ಲ. ಆದ್ದರಿಂದ ಅವನು ತನ್ನ ಪ್ರೀತಿಯನ್ನು ಅವಳಿಗೆ ತೋರಿಸಲು ಮತ್ತು ಅವಳನ್ನು ಮರಳಿ ಗೆಲ್ಲುವ ಪ್ರಯತ್ನದಲ್ಲಿ ತೀವ್ರ ಹಂತಕ್ಕೆ ಹೋಗಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಮಾಜಿ ಗೆಳತಿಯ ಕಚೇರಿಯ ಹೊರಗೆ ಮಳೆಯಲ್ಲಿ 21 ಗಂಟೆಗಳ ಕಾಲ ಮೊಣಕಾಲುಗಳ ಮೇಲೆ ಕಕುಳಿತು, ತನ್ನನ್ನು ಮರಳಿ ಸೇರುವಂತೆ ಬೇಡಿಕೊಂಡಿದ್ದಾನೆ.
ವರದಿಯ ಪ್ರಕಾರ, ಮಾರ್ಚ್ 28 ರಂದು ಮಧ್ಯಾಹ್ನ 1 ರಿಂದ ಮರುದಿನ ಬೆಳಿಗ್ಗೆ 10 ರವರೆಗೆ 21 ಗಂಟೆಗಳ ಕಾಲ ವ್ಯಕ್ತಿ ದಾಝೌನಲ್ಲಿ ಕಟ್ಟಡದ ಪ್ರವೇಶದ್ವಾರದ ಹೊರಗೆ ಮಂಡಿಯೂರಿ ಕುಳಿತಿದ್ದಾನೆ. ಮಳೆ ಮತ್ತು ಚಳಿಯೊಂದಿಗೆ ಹೋರಾಡುತ್ತಾ, ಅವನು ಅವಳ ಕಚೇರಿಯ ಹೊರಗೆ ಮಂಡಿಯೂರಿ ಕೈಯಲ್ಲಿ ಗುಲಾಬಿಗಳ ಪುಷ್ಪಗುಚ್ಛದೊಂದಿಗೆ ತನ್ನ ಮಾಜಿ ಮನಸ್ಸು ಬದಲಾಯಿಸಲು ಕಾಯುತ್ತಿದ್ದನು.
ಈ ವಿಲಕ್ಷಣ ಸನ್ನಿವೇಶವು ಎಷ್ಟು ಗಮನ ಸೆಳೆಯಿತು ಎಂದರೆ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೂ ವಿಚಲಿತರಾಗದೆ, ‘ನಾನು ಇಲ್ಲಿ ಮಂಡಿಯೂರಿ ಕೂರುವುದು ಕಾನೂನು ಬಾಹಿರವೇ? ಎಂದು ಪ್ರಶ್ನಿಸಿದ್ದಾನೆ. ಆದರೆ ಕೊನೆಗಾದರೂ ಗೆಳತಿ ಮನಸ್ಸು ಬದಲಾಯಿಸಿದಳೋ ತಿಳಿಯದು!