ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡ ಕಾರಣ 90 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರವೊಂದನ್ನು ಚೀನಾ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿದೆ.
ಚೀನಾದ ಈಶಾನ್ಯದಲ್ಲಿರುವ ಚಾಂಗ್ಚುನ್ ಎಂಬ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಅಲ್ಲಿನ ನಿವಾಸಿಗಳಿಗೆ ಮೂರು ಸುತ್ತಿನ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ಅಗತ್ಯವಲ್ಲದ ವಹಿವಾಟುಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.
BIG NEWS: ರಾಜ್ಯದಲ್ಲಿಂದು 181 ಜನರಿಗೆ ಸೋಂಕು, ಇಲ್ಲಿದೆ ಮಾಹಿತಿ
ಶುಕ್ರವಾರದಂದು ಒಂದೇ ದಿನದಲ್ಲಿ ಸ್ಥಳೀಯವಾಗಿ 397 ಪ್ರಕರಣಗಳನ್ನು ದಾಖಲಿಸಿದ ಚೀನಾ, ಇವುಗಳಲ್ಲಿ 98 ಪ್ರಕರಣಗಳನ್ನು ಚಾಂಗ್ಚುನ್ ಸುತ್ತಮುತ್ತಲೇ ಕಂಡಿದೆ. ಸೋಂಕಿನ ವಿರುದ್ಧ ’ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸುತ್ತಿರುವ ಚೀನಾ, ಸಾಂಕ್ರಮಿಕವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇಲ್ಲಿಗೆ ಹತ್ತಿರದ ಜಿಲಿನ್ ಪ್ರದೇಶದಲ್ಲಿ 93 ಹೊಸ ಕೇಸುಗಳು ದಾಖಲಾಗಿದ್ದು, ಈ ಊರಿನಲ್ಲಿ ಭಾಗಶಃ ಲಾಕ್‌ಡೌನ್ ಮಾಡಲಾಗಿದೆ.