ಚೀನಾ ಜನರ ಆಹಾರ ಚಿತ್ರವಿಚಿತ್ರವಾಗಿರುತ್ತದೆ. ಹಾವು, ವಿಷ ಜಂತುಗಳು ಸೇರಿದಂತೆ ನಾಯಿಯನ್ನೂ ಅವರು ಬಿಡುವುದಿಲ್ಲ. ಕೊರೊನಾ ಸಮಯದಲ್ಲಿ ಚೀನಾದ ಪ್ರಾಣಿಗಳ ಮಾರುಕಟ್ಟೆ ಸುದ್ದಿಯಲ್ಲಿತ್ತು. ವುಹಾನ್ ಈ ಮಾರುಕಟ್ಟೆಯಲ್ಲಿಯೇ ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಿದ್ದು ಎಂಬ ಆರೋಪವೂ ಇದೆ.
ಚೀನಾದಲ್ಲಿ ನಾಯಿಗಳ ಸೂಪ್ ಗೆ ಬೇಡಿಕೆ ಹೆಚ್ಚಿದೆ. ಇದಕ್ಕಾಗಿ ನಾಯಿಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ನಾಯಿ ಮಾಂಸದ ಉತ್ಸವದ ಹೆಸರಿನಲ್ಲೂ ಲಕ್ಷಗಟ್ಟಲೆ ನಾಯಿಗಳ ಹತ್ಯೆ ಮಾಡಲಾಗುತ್ತದೆ.
BIG NEWS: ಕರ್ನಾಟಕ ಬಂದ್ ಕೈಬಿಟ್ಟ ಕನ್ನಡ ಸಂಘಟನೆಗಳು; ಇಂದು ಬೃಹತ್ ಪ್ರತಿಭಟನೆ
ಕೆಲವೊಮ್ಮೆ ಗರ್ಭಿಣಿ ನಾಯಿಯನ್ನೂ ಅಲ್ಲಿನವರು ಬಿಡುವುದಿಲ್ಲ. ನಾಯಿಗಳನ್ನು ಹಿಡಿಯಲು ಜನರು, ನಾಯಿ ಓಡಿ ಹೋಗದಂತೆ ಮೊದಲು ನೋಡಿಕೊಳ್ಳುತ್ತಾರೆ. ಇದಕ್ಕಾಗಿ ನಾಯಿಗಳ ಪಾದಗಳನ್ನು ಕತ್ತರಿಸುತ್ತಾರೆ. ನಾಯಿಗಳ ರಕ್ಷಣೆಗೆ ಅನೇಕ ಸಂಸ್ಥೆಗಳು ನಿರಂತರ ಪ್ರಯತ್ನ ನಡೆಸುತ್ತಿವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್ ಸಂಸ್ಥೆ ಮಾಹಿತಿ ಪ್ರಕಾರ, ಚೀನಾದಲ್ಲಿ ಪ್ರತಿ ವರ್ಷ 1 ರಿಂದ 20 ಮಿಲಿಯನ್ ನಾಯಿಗಳನ್ನು ಕೊಲ್ಲಲಾಗುತ್ತದೆ ಎಂದು ಅಂದಾಜಿಸಿದೆ. ಇಲ್ಲಿ ವಯಸ್ಕ ನಾಯಿಯನ್ನು ಸೂಪ್ ಅಥವಾ ಸ್ಟ್ಯೂನಲ್ಲಿ ಬೇಯಿಸಲು 100 ಪೌಂಡ್‌ಗಳಿಗೆ (ಸುಮಾರು 10 ಸಾವಿರ ರೂಪಾಯಿ) ಮಾರಾಟ ಮಾಡಲಾಗುತ್ತದೆ.