ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮೇರೆ ಮೀರುತ್ತಿದ್ದು, ಅವರುಗಳ ಕ್ರೌರ್ಯಕ್ಕೆ ಇಡೀ ವಿಶ್ವವೇ ಕಿಡಿ ಕಾರುತ್ತಿದೆ. ತಾಲಿಬಾನಿಗಳ ಕ್ರೂರ ವರ್ತನೆಗೆ ಅಫ್ಘಾನಿಸ್ತಾನದ ಜನತೆ ಅಕ್ಷರಶಃ ನಲುಗಿ ಹೋಗಿದ್ದು, ಜೀವ ಉಳಿದರೆ ಸಾಕೆಂಬ ಕಾರಣಕ್ಕೆ ದೇಶ ತೊರೆಯಲು ಹಾತೊರೆಯುತ್ತಿದ್ದಾರೆ.
ಇದರ ಮಧ್ಯೆ ಕುತಂತ್ರಿ ಚೀನಾ ಮತ್ತೊಂದು ಘಾತುಕ ನಡೆಗೆ ಅಡಿಯಿಟ್ಟಿದೆ. ಈಗಾಗಲೇ ವಿವಿಧ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವ ನೆಪದಲ್ಲಿ ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳನ್ನು ತನ್ನ ಕೈಗೊಂಬೆ ಮಾಡಿಕೊಂಡಿರುವ ಚೀನಾ ಸರ್ಕಾರ ಇದೀಗ ತಾಲಿಬಾನಿಗಳ ಸಹಕಾರಕ್ಕೂ ಮುಂದಾಗಿದೆ.
ಶಾಲೆ ಶುರುವಾದ ಬೆನ್ನಲ್ಲೇ ತಜ್ಞರಿಂದ ಶಾಕಿಂಗ್ ನ್ಯೂಸ್: ಅಕ್ಟೋಬರ್ ನಲ್ಲಿ ಕೊರೋನಾ ಮೂರನೇ ಅಲೆ ಅಟ್ಟಹಾಸ –ಮಕ್ಕಳೇ ಟಾರ್ಗೆಟ್
ಆಫ್ಘಾನಿಸ್ತಾನದ ತಾಲಿಬಾನಿನ ಆಡಳಿತಕ್ಕೆ ಹಣಕಾಸಿನ ನೆರವು ನೀಡುವುದಾಗಿ ಚೀನಾ ಘೋಷಿಸಿದ್ದು, ಈ ಮೂಲಕ ಅವರುಗಳ ನೆರವಿಗೆ ನಿಂತಿದೆ. ಪಾಕಿಸ್ತಾನ ಮತ್ತು ಚೀನಾ ಈ ಮೊದಲೇ ತಾಲಿಬಾನ್ ಆಡಳಿತಕ್ಕೆ ಬೆಂಬಲ ಘೋಷಿಸಿದ್ದು, ಇದೀಗ ಹಣಕಾಸು ನೆರವಿನ ನಿರ್ಧಾರ ಕೈಗೊಳ್ಳುವ ಮೂಲಕ ಚೀನಾ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.