ಪೂರ್ವ ಚೀನಾದ ನಗರ ಜಿನಾನ್ ನಲ್ಲಿ ಆಮದು ಮಾಡಿಕೊಳ್ಳಲಾದ ಬೀಫ್ ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.
ಬ್ರೆಜಿಲ್, ನ್ಯೂಜಿಲೆಂಡ್, ಬೊಲಿವಿಯಾದಿಂದ ಚೀನಾಗೆ ಆಮದು ಮಾಡಿಕೊಳ್ಳಲಾಗಿದ್ದ ಆಹಾರ ಪದಾರ್ಥಗಳ ಪರೀಕ್ಷೆ ವೇಳೆ ಮಾಂಸದಲ್ಲಿ ಕೊರೋನಾ ಸೋಂಕು ಇರುವುದು ಕಂಡುಬಂದಿದೆ. ಜಿನಾನ್ ಮುನ್ಸಿಪಲ್ ಹೆಲ್ತ್ ಕಮಿಷನ್ ಶನಿವಾರ ತಡರಾತ್ರಿ ವೆಬ್ಸೈಟ್ ನಲ್ಲಿ ಪ್ರಕಟಣೆ ನೀಡಿದೆ.
ಶಾಂಘೈನ ಯಾಂಗ್ ಶಾನ್ ಪ್ರಾಂತ್ಯದ ಜಿನಾನ್ ನಗರದಲ್ಲಿ ಆಮದು ಮಾಡಿಕೊಳ್ಳಲಾಗಿದ್ದ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ಪತ್ತೆಯಾಗಿದೆ ಎಂದು ಹೇಳಿದ್ದರೂ, ಉತ್ಪನ್ನಗಳನ್ನು ರವಾನಿಸಿದ ಕಂಪನಿಗಳ ಹೆಸರನ್ನು ನೀಡಿಲ್ಲ. ಕೊರೋನಾ ಸೋಂಕು ಹರಡಬಹುದಾದ ವೈರಸ್ ಇರುವುದನ್ನು ಮಾಂಸದಲ್ಲಿ ಪತ್ತೆ ಮಾಡಲಾಗಿದೆ.
ಬಂದರು ಮೂಲಕ ಮಾಂಸ ಬಂದಿರುವುದಾಗಿ ಹೇಳಲಾಗಿದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ಖರೀದಿ ಮಾಡಲಾಗುತ್ತದೆ. ಇವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನ ವೈರಸ್ ಕಂಡುಬಂದಿದೆ ಎಂದು ಹೇಳಲಾಗಿದೆ.
ಕಿಂಗ್ದಾವೋ ಕೋಲ್ಡ್ ಸ್ಟೋರೇಜ್ ಘಟಕದಿಂದ ಜೆಂಗ್ ಸು ಸಿಟಿ ಮಾರುಕಟ್ಟೆಯ ಗೋದಾಮಿಗೆ ಸರಕು ಕಳಿಸಿದ್ದು, ಗೋದಾಮಿಗೆ ಪ್ರವೇಶಿಸುವ ಮೊದಲು ಸ್ಕ್ರೀನಿಂಗ್ ಮಾಡಿದಾಗ ವೈರಸ್ ಕಂಡು ಬಂದ ಕಾರಣ ಚೀನಾ ಆರೋಗ್ಯಾಧಿಕಾರಿಗಳು ಕ್ರಮಕೈಗೊಂಡಿದ್ದು, ಮಾಂಸ ಆಮದು ಬಗ್ಗೆ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.