alex Certify ಬೇರೆಡೆಗಿಂತ ನಮ್ಮಲ್ಲೇ ಕಡಿಮೆ ಬಿಎಫ್‌- 7 ಸೋಂಕು: ರಾಗ ಬದಲಿಸಿದ ಚೀನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೆಡೆಗಿಂತ ನಮ್ಮಲ್ಲೇ ಕಡಿಮೆ ಬಿಎಫ್‌- 7 ಸೋಂಕು: ರಾಗ ಬದಲಿಸಿದ ಚೀನಾ…!

ಕೋವಿಡ್‌-19 ರೂಪಾಂತರಿ ಬಿಎಫ್‌- 7 ಚೀನಾವನ್ನು ದಂಗುಬಡಿಸಿದೆ. ಪ್ರತಿದಿನ, ಲಕ್ಷಾಂತರ ಜನರು ವೈರಸ್‌ಗೆ ತುತ್ತಾಗುತ್ತಿದ್ದಾರೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತುತ್ತಿದೆ.

ರೋಗಿಗಳಿಗೆ ಸ್ಥಳವಿಲ್ಲದೆ ಆಸ್ಪತ್ರೆಗಳು ತುಂಬಿವೆ. ವೈದ್ಯಕೀಯ ಸಿಬ್ಬಂದಿಗೆ ಯಾವುದೇ ರಜೆ ತೆಗೆದುಕೊಳ್ಳಲು ಅವಕಾಶವಿಲ್ಲ ಮತ್ತು ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸ ಮಾಡಲು ಕೇಳಲಾಗಿದೆ. ವೈದ್ಯರ ಕೊರತೆ ಇದೆ,

ಔಷಧಿಗಳ ಕೊರತೆ ಇದೆ. ಶವಸಂಸ್ಕಾರದ ಮೈದಾನದಲ್ಲಿ ಶವಗಳ ಉದ್ದನೆಯ ಸರತಿ ಸಾಲು ಇದೆ, ಸರ್ಕಾರ ಅವುಗಳನ್ನು ಕಂಟೈನರ್‌ಗಳಲ್ಲಿ ಸಾಗಿಸುತ್ತಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಚೀನಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಸಾವು ನೋವಿನ ವರದಿಯನ್ನು ನೀಡುವುದನ್ನು ಇದಾಗಲೇ ನಿಲ್ಲಿಸಿರುವ ಚೀನಾ, ತನ್ನ ದೇಶದಲ್ಲಿ ವಿಶ್ವದಲ್ಲೇ ಅತಿ ಕಡಿಮೆ ಸಾವು ಸಂಭವಿಸಿದೆ ಎಂದು ಹೇಳಿಕೊಳ್ಳುತ್ತಿದೆ.

ಚೀನಾದಲ್ಲಿ ಡೆಲ್ಟಾ ರೂಪಾಂತರವು ಪ್ರಚಲಿತವಾಗಿಲ್ಲ ಮತ್ತು ಓಮಿಕ್ರಾನ್ ರೂಪಾಂತರದೊಂದಿಗೆ ಮರುಸಂಯೋಜಿಸಲು ಯಾವುದೇ ಡೆಲ್ಟಾ ರೂಪಾಂತರ ಕಂಡುಬಂದಿಲ್ಲ ಎಂದು ಚೀನಾದ ಸಿಡಿಸಿ ಅಧಿಕಾರಿ ಕ್ಸು ವೆನ್ಬೋ ಹೇಳಿದ್ದಾರೆ.

ಆದರೆ ಇತ್ತೀಚೆಗೆ ಚೀನಾದ ಆರೋಗ್ಯ ಅಧಿಕಾರಿಯೊಬ್ಬರು ಪ್ರತಿದಿನ 5 ಲಕ್ಷ ಕರೋನವೈರಸ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದ್ದು ವೈರಲ್‌ ಆಗಿತ್ತು. ಆದರೆ ಚೀನಾ ಮಾತ್ರ ಏನೂ ಆಗೇ ಇಲ್ಲ ಎನ್ನುತ್ತಿರುವುದನ್ನು ಯಾರೂ ನಂಬದ ಸ್ಥಿತಿ ಉಂಟಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...