ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯ ದೇಶವಾದ ಚೀನಾದಲ್ಲಿ ’ಒಂದು ಕುಟುಂಬಕ್ಕೆ ಒಂದೇ ಮಗು’ ನಿಯಮ ಬದಲಾವಣೆ ಮಾಡಿ ಒಂದು ಕುಟುಂಬಕ್ಕೆ ಮೂರು ಮಕ್ಕಳನ್ನು ಮಾಡಿಕೊಳ್ಳುವ ಅವಕಾಶ ನೀಡುವ ಸಂಬಂಧ ನೀತಿಯೊಂದನ್ನು ತರಲು ಅಲ್ಲಿನ ರಾಷ್ಟ್ರೀಯ ಶಾಸಕಾಂಗ ಪ್ರಸ್ತಾವನೆ ಇಟ್ಟಿದೆ.
ಕಳೆದ ಮೂರು ದಶಕಗಳಿಂದ ಒಂದೇ ಮಗು ನೀತಿಯಿಂದಾಗಿ 40 ಕೋಟಿ ಮಕ್ಕಳ ಜನನವನ್ನು ತಡೆಗಟ್ಟಲಾಗಿದ್ದು, ದೇಶದ ಜನನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿರುವ ಕಾರಣ ನೀತಿ ಬದಲಾವಣೆ ಮಾಡಲು ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷ ನಿರ್ಧರಿಸಿದೆ.
ಚೀನೀ ದಂಪತಿಗಳಿಗೆ ಮೂರು ಮಕ್ಕಳವರೆಗೆ ಮಾಡಿಕೊಳ್ಳಲು ಅವಕಾಶ ನೀಡುವ ಪರಿಷ್ಕೃತ ಜನಸಂಖ್ಯೆ ಮತ್ತು ಕುಟುಂಬ ಯೋಜನೆಗೆ ರಾಷ್ಟ್ರೀಯ ಜನರ ಕಾಂಗ್ರೆಸ್ (ಎನ್‌ಪಿಸಿ) ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.
ನವಜಾತ ಶಿಶುವಿನ ಚಿಕಿತ್ಸೆಗಾಗಿ ಪದಕವನ್ನೇ ಹರಾಜಿಗಿಟ್ಟ ಬೆಳ್ಳಿ ಪದಕ ಗೆದ್ದ ಒಲಂಪಿಕ್ಸ್ ಆಟಗಾರ್ತಿ
ಹೆಚ್ಚು ಮಕ್ಕಳನ್ನು ಹೆತ್ತರೆ ಆಗಬಹುದಾದ ಆರ್ಥಿಕ ಹೊರೆಯ ಬಗ್ಗೆ ಚಿಂತಿತರಾದ ಚೀನೀ ದಂಪತಿಗಳ ಮನವೊಲಿಸಲು ಈ ಸಂಬಂಧ ಸಾಮಾಜಿಕ ಹಾಗೂ ಆರ್ಥಿಕ ಪ್ರೋತ್ಸಾಹದ ಕ್ರಮಗಳನ್ನು ತರಲು ಚೀನೀ ಸರ್ಕಾರ ಚಿಂತನೆ ನಡೆಸಿದೆ. ಮಕ್ಕಳ ಪಾಲನೆ-ಪೋಷಣೆ, ವಿದ್ಯಾಭ್ಯಾಸಗಳ ಬೆಂಬಲದೊಂದಿಗೆ ಕುಟುಂಬಗಳಿಗೆ ತೆರಿಗೆ, ವಿಮೆ, ಗೃಹ ನಿರ್ಮಾಣ, ಉದ್ಯೋಗ ಸೇರಿದಂತೆ ಅನೇಕ ಮಹತ್ವದ ವಿಚಾರಗಳಲ್ಲಿ ಸರ್ಕಾರದ ಬೆಂಬಲ ನೀಡಲು ಹೊಸ ಕಾನೂನು ಸಾಧ್ಯತೆಗಳನ್ನು ಕೊಡಲಿದೆ ಎಂದು ಚೀನಾ ಡೈಲಿ ವರದಿ ಮಾಡಿದೆ.