
ಕೊರೊನಾ ವೈರಸ್ ವಿಶ್ವದಲ್ಲಿ ಭಾರೀ ನಾಶಕ್ಕೆ ಕಾರಣವಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ ಚೀನಾ ಮತ್ತೆ ಕಂಟಕವಾಗುವ ಸಾಧ್ಯತೆಯಿದೆ. ಚೀನೀ ಮಾರುಕಟ್ಟೆಯಲ್ಲಿ ಕನಿಷ್ಠ 18 ಅಪಾಯಕಾರಿ ವೈರಸ್ಗಳಿವೆ.
ಇದು ಮತ್ತೊಂದಿಷ್ಟು ರೋಗ ಹರಡುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನ ಹೇಳಿದೆ.
ಪ್ರೇಕ್ಷಕರ ಗಮನ ಸೆಳೆದ ‘ಪೃಥ್ವಿರಾಜ್’ ಟೀಸರ್
ಚೀನಾ ಮಾರುಕಟ್ಟೆಯಲ್ಲಿ ಈ ಅಧ್ಯಯನ ನಡೆದಿದೆ. ಚೀನಾದ ಜನರು ಚಿತ್ರವಿಚಿತ್ರ ಆಹಾರ ಸೇವನೆ ಮಾಡುತ್ತಾರೆ. ಚೀನಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರಾಣಿಗಳು ಮತ್ತು ಅವುಗಳ ಮಾಂಸದಲ್ಲಿ ವೈರಸ್ ಕಂಡು ಬಂದಿದೆ. ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಅಪಾಯವನ್ನುಂಟು ಮಾಡುವ ಅನೇಕ ವೈರಸ್ ಇದ್ರಲ್ಲಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಸ್ತನಿಗಳ ಮಾಂಸದ ಅಧ್ಯಯನ ನಡೆದಿದೆ. ಅವುಗಳಲ್ಲಿ 71 ಬಗೆಯ ವೈರಸ್ಗಳು ಇರುವುದು ಕಂಡುಬಂದಿದೆ. ಇವುಗಳಲ್ಲಿ 18 ವೈರಸ್, ಸಾಕುಪ್ರಾಣಿಗಳು ಮತ್ತು ಮನುಷ್ಯರಿಗೆ ಅಪಾಯವನ್ನುಂಟು ಮಾಡುತ್ತವೆ ಎಂಬುದು ಗೊತ್ತಾಗಿದೆ.
ಕೊರೊನಾ ಮಧ್ಯೆ ಮತ್ತೊಂದು ಅಚ್ಚರಿ ಬೆಳವಣಿಗೆ: ಉದ್ಯೋಗ ಕೊಡುತ್ತೇನೆಂದ್ರೂ ಬರುವವರಿಲ್ಲ..! ಕೈನಲ್ಲಿ ಕಾಸಿಲ್ಲವೆಂದ್ರೂ ಕೆಲಸ ಬಿಡ್ತಿದ್ದಾರೆ ಜನ
ಸಿಡ್ನಿ ವಿಶ್ವವಿದ್ಯಾನಿಲಯದ ಲೇಖಕ ಎಡ್ವರ್ಡ್ ಹೋಮ್ಸ್ ದ್ವಿಮುಖ ವೈರಸ್ ಸಂಚಾರವಿದೆ ಎಂದಿದ್ದಾರೆ. ಮನುಷ್ಯನಿಂದ ಪ್ರಾಣಿ ಹಾಗೂ ಪ್ರಾಣಿಯಿಂದ ಮನುಷ್ಯನಿಗೆ ವೈರಸ್ ಸಂಚಾರವಾಗಿದೆ ಎಂದಿದ್ದಾರೆ. ಬೆಕ್ಕುಗಳಂತಹ ಮಾಂಸಾಹಾರಿ ಪ್ರಾಣಿಗಳಿಂದ ಹೆಚ್ಚು ವೈರಸ್ ಹರಡುತ್ತದೆ ಎಂದಿದ್ದಾರೆ. ಕೊರೊನಾ ವೈರಸ್ ಆರಂಭ ಕೂಡ ಹೀಗೆ ಆಗಿದೆ. ಕೊರೊನಾ ವೈರಸ್ ಮೊದಲ ಪ್ರಕರಣ ಚೀನಾದ ವುಹಾನ್ ನಲ್ಲಿ ಕಂಡು ಬಂದಿತ್ತು. ಆದ್ರೆ ಯಾವ ಮಾರುಕಟ್ಟೆಯಿಂದ ವೈರಸ್ ಹರಡಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.