ಪ್ರಾಣಿಗಳು ಸಹಾನುಭೂತಿಯ ಜೀವಿಗಳು, ಪರಸ್ಪರ ಔದಾರ್ಯವನ್ನು ತೋರಿಸಲು ಹೆಸರುವಾಸಿಯಾಗಿದೆ.
ಮಾತನಾಡಲು ಬಾರದೇ ಇರಬಹುದು, ಮೌಖಿಕ ಸಂವಹನದ ಕೊರತೆಯ ಹೊರತಾಗಿಯೂ ಹೇಗಾದರೂ ಪರಸ್ಪರ ಅರ್ಥಮಾಡಿಕೊಳ್ಳುತ್ತವೆ.
ಮನುಷ್ಯರಂತೆ ಚಿಂಪಾಂಜಿಗಳು ಸೇರಿದಂತೆ ಅನೇಕ ಪ್ರಾಣಿಗಳು ತಮ್ಮ ಹತ್ತಿರದ ಸ್ನೇಹಿತರೊಂದಿಗೆ ಆಹಾರವನ್ನು ಹಂಚಿಕೊಳ್ಳುವ ಅಭ್ಯಾಸ ಹೊಂದಿವೆ.
ಚಿಂಪಾಂಜಿಯೊಂದು ಆಮೆಯೊಂದಿಗೆ ಹಣ್ಣನ್ನು ಹಂಚಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಂಪಾಂಜಿಯು ತನ್ನ ಸ್ನೇಹಿತ ಆಮೆಯೊಂದಿಗೆ ಸೇಬನ್ನು ತಿನ್ನುವುದು ಮತ್ತು ಹಂಚಿಕೊಳ್ಳುವುದು ಕಂಡುಬರುತ್ತದೆ.
ವಿಡಿಯೊ 6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ನೂರಾರು ಕಾಮೆಂಟ್ಗಳೊಂದಿಗೆ 35,000 ಕ್ಕೂ ಹೆಚ್ಚು ಶೇರ್ ಗಳಿಸಿದೆ.
“ನಾವು ಗಮನ ಹರಿಸಿದರೆ ಪ್ರಾಣಿಗಳು ನಮಗೆ ತುಂಬಾ ಕಲಿಸಬಹುದು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
https://twitter.com/buitengebieden/status/1548674662275637251?ref_src=twsrc%5Etfw%7Ctwcamp%5Etweetembed%7Ctwterm%5E1548674662275637251%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Ftrending-video-chimpanzee-shares-fruit-with-tortoise-heartwarming-video-6-million-views-watch-5520444%2F