ಸಾಮಾನ್ಯವಾಗಿ ನಮಗೆ ಗಾಯವಾದರೆ ಬ್ಯಾಂಡೇಜ್, ಹತ್ತಿ ಅಥವಾ ಆಂಟಿಸೆಪ್ಟಿಕ್ ದ್ರವಗಳನ್ನು ಹುಡುಕುತ್ತೇವೆ. ಆದರೆ ಚಿಂಪಾಂಜಿಗಳು ತಮ್ಮ ಗಾಯಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತವೆ.
ಗಾಯಗಳನ್ನು ವಾಸಿ ಮಾಡಿಕೊಳ್ಳಲು ಕೆಲ ಬಗೆಯ ಕೀಟಗಳನ್ನು ಚಿಂಪಾಂಜಿಗಳು ಬಳಸುತ್ತವೆ. ತಾಯಿ ಚಿಂಪಾಂಜಿಯೊಂದು ಗಾಯಗೊಂಡ ತನ್ನ ಮರಿಗೆ ಕೆಲ ಬಗೆಯ ಕೀಟಗಳನ್ನು ಗಾಯದ ಮೇಲೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಒಜ಼ೌಂಗಾ ಚಿಂಪಾಂಜಿ ಪ್ರಾಜೆಕ್ಟ್‌ನ ಸಂಶೋಧಕರು ಈ ವಿಚಾರವನ್ನು ಪತ್ತೆ ಮಾಡಿದ್ದಾರೆ.
‘ಗ್ರೀನ್ ಟೀ’ ಯಾರ್ಯಾರು ಸೇವಿಸಬಾರದು ಗೊತ್ತಾ…..?
ಸುಜ಼ೀ ಹೆಸರಿನ ಈ ವಯಸ್ಕ ಚಿಂಪಾಜಿ ತನ್ನ ಮಗನನ್ನು ಆರೈಕೆ ಮಾಡುತ್ತಿರುವುದನ್ನು ಸಂಶೋಧಕರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕೀಟವೊಂದನ್ನು ಹಿಡಿದು ತನ್ನ ಬಾಯಲ್ಲಿಟ್ಟುಕೊಂಡ ಜಿಂಪಾಂಜಿ ಅದನ್ನು ತನ್ನ ಮರಿಯ ಗಾಯಕ್ಕೆ ಹಾಕಿದೆ. ಅದು ಯಾವ ಕೀಟವೆಂದು ಸಂಶೋಧಕರಿಗೆ ಸ್ಪಷ್ಟವಾಗಿ ಗೊತ್ತಾಗಿಲ್ಲವಾದರೂ, ಈ ಕೀಟದಿಂದ ಚಿಂಪಾಜಿಗಳು ಗಾಯ ವಾಸಿ ಮಾಡಿಕೊಳ್ಳಬಹುದು ಎಂದು ನಂಬಿದ್ದಾರೆ.
ಈ ವಿಡಿಯೋ ಇಲ್ಲಿದೆ: