alex Certify ಮದುವೆಗೆ ಮೊದಲೇ ಸಂಬಂಧ ಬೆಳೆಸಿದ ಯುವತಿಯಿಂದ ಆಘಾತಕಾರಿ ಕೃತ್ಯ: ವರನ ಕೊಂದ ಪ್ರಿಯಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಮೊದಲೇ ಸಂಬಂಧ ಬೆಳೆಸಿದ ಯುವತಿಯಿಂದ ಆಘಾತಕಾರಿ ಕೃತ್ಯ: ವರನ ಕೊಂದ ಪ್ರಿಯಕರ

ಲಖ್ನೋ: ಉತ್ತರಪ್ರದೇಶ ರಾಜಧಾನಿ ಲಖ್ನೋದಿಂದ ವರದಿಯಾದ ಕೊಲೆ ಪ್ರಕರಣವೊಂದರಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿಯ ಪ್ರಿಯಕರನೇ ವರನನ್ನು ಕೊಲೆ ಮಾಡಿದ ಘಟನೆ ನಡೆದಿದೆ.

26 ವರ್ಷದ ಮಹಿಳೆ ಲಖ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದಲ್ಲಿ ವಾಸವಾಗಿದ್ದು ಆಕೆ ಶೇನ್ ಅಲಿ ಅಲಿಯಾಸ್ ಸೋನು ಜೊತೆಗೆ ಸಂಬಂಧ ಹೊಂದಿದ್ದಳು. ಆಕೆಯ ಕುಟುಂಬದವರು ಬಂಥ್ರಾ ನಿವಾಸಿ ಶಹಾಬುದ್ದೀನ್ ಜೊತೆಗೆ ಮದುವೆ ನಿಶ್ಚಯ ಮಾಡಿದ್ದರು.

ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಶಹಾಬುದ್ದಿನ್ ಮದುವೆಯಾಗಲು ಇಷ್ಟವಾಗದೇ ಆತನನ್ನು ಕೊಲೆ ಮಾಡುವಂತೆ ಪ್ರಿಯಕರ ಶೇನ್ ಅಲಿಗೆ ಹೇಳಿದ್ದಾಳೆ. ಮಾರ್ಚ್ 11 ರಂದು ಯುವತಿಯ ಜನ್ಮದಿನ ಆಚರಿಸಲು ಹೋಗಿದ್ದ ಶಹಾಬುದ್ದೀನ್ ಮನೆಗೆ ಮರಳಿ ಬಂದಿರಲಿಲ್ಲ.

ನಂತರದಲ್ಲಿ ಬಾಬು ಖೇರಾ ಗ್ರಾಮದ ಬಳಿ ಆತನ ಮೃತದೇಹ ಕಂಡು ಬಂದಿತ್ತು. ಆತನ ಮೊಬೈಲ್ ಕರೆ ಜಾಡು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಕೆಯ ಆಜ್ಞೆಯಂತೆ ಪ್ರಿಯಕರ ಶೇರ್ ಅಲಿ ತನ್ನ ಗೆಳೆಯನೊಬ್ಬನ ಸಹಾಯದಿಂದ ಶಹಾಬುದ್ದೀನ್ ಕೊಲೆ ಮಾಡಿರುವುದು ಗೊತ್ತಾಗಿದೆ. ಮಾರಕಾಸ್ತ್ರದಿಂದ ಇರಿದು ನಾಯಿಯನ್ನು ಕಟ್ಟಿ ಹಾಕಲು ಬಳಸುವ ಸರಪಳಿಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...