ಸೋಮವಾರ ಅಮೆರಿಕಾದ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ವಿಡಿಯೋವನ್ನ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ನ್ಯಾಶ್ವಿಲ್ಲೆ ಶಾಲೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನರ ಹತ್ಯೆ ನಡೆದ ಶಾಲೆಯಲ್ಲಿ ದಾಳಿಕೋರನ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೋ ಬಿಡುಗಡೆಯಾಗಿದೆ.
ಪೊಲೀಸ್ ಅಧಿಕಾರಿಗಳು ಕ್ರಿಶ್ಚಿಯನ್ ಶಾಲೆಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವಿಡಿಯೋ ಇದಾಗಿದ್ದು ಅದರಲ್ಲಿ ದಾಳಿಕೋರನ ಸೆರೆಹಿಡಿದಿರೋದು ವರದಿಯಾಗಿದೆ.
ಆರು ನಿಮಿಷಗಳ ವೀಡಿಯೊವು ಆಯುಧಗಳೊಂದಿಗೆ ಶಸ್ತ್ರಸಜ್ಜಿತವಾದ ಪೊಲೀಸರು ತರಗತಿಯಿಂದ ತರಗತಿಯ ಕಡೆಗೆ ಹೋಗುತ್ತಿರುವುದನ್ನು ತೋರಿಸುತ್ತದೆ. ಶೂಟರ್ಗಾಗಿ ಹುಡುಕುತ್ತಿದ್ದು ಅಧಿಕಾರಿಗಳಾದ ರೆಕ್ಸ್ ಎಂಗೆಲ್ಬರ್ಟ್ ಮತ್ತು ಮೈಕೆಲ್ ಕೊಲಾಜೊ ಅವರ ಬಾಡಿ ಕ್ಯಾಮೆರಾಗಳಿಂದ ತೆಗೆದ ದೃಶ್ಯಗಳು ಇವಾಗಿವೆ. ಇದರಲ್ಲಿ ದಾಳಿಕೋರರನ್ನ ಪೊಲೀಸರು ಮಂಡಿಯೂರುವಂತೆ ಮಾಡಿದ್ದಾರೆ.
ಆರೋಪಿ ಆಡ್ರೆ ಹೇಲ್ ಮೂರು ಮಕ್ಕಳು ಮತ್ತು ಮೂವರು ವಯಸ್ಕರನ್ನು ಕೊಂದಿದ್ದು ಆತ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದ ಎಂಬುದು ಗೊತ್ತಾಗಿದೆ.
https://twitter.com/BANDIT_XRAY/status/1640739470977781765?ref_src=twsrc%5Etfw%7Ctwcamp%5Etweetembed%7Ctwterm%5E1640739470977781765%7Ctwgr%5Ebf8422f860a5cc1579222f30afb800e25b5fcb42%7Ctwcon%5Es1_&ref_url=https%3A%2F%2Fwww.news18.com%2Fworld%2Fon-cam-chilling-bodycam-footage-shows-moment-us-police-took-down-nashville-school-shooter-7409227.html