ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಒಂದೂವರೆ ಲಕ್ಷಕ್ಕೂ ಅಧಿಕ ಮೆಣಸಿನ ಕಾಯಿ ಚೀಲಗಳು ಮಾರಾಟಕ್ಕೆ ಬಂದಿದ್ದು, ದರದಲ್ಲಿ ಸ್ಥಿರತೆ ಕಂಡು ಬಂದಿದೆ.
ಕಳೆದ ಕೆಲವು ವಾರಗಳಿಂದ ಮೆಣಸಿನಕಾಯಿ ಚೀಲಗಳ ಆವಕ ಲಕ್ಷ ದಾಟುತ್ತಿದ್ದು, ಗುರುವಾರ 1,64,515 ಮೆಣಸಿನಕಾಯಿ ಚೀಲಗಳು ಮಾರಾಟಕ್ಕೆ ಬಂದಿದ್ದು, ವ್ಯಾಪಾರಸ್ಥರಲ್ಲಿ ಹರ್ಷ ತಂದಿದೆ. ಮೆಣಸಿನಕಾಯಿ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಕಡ್ಡಿ, ಡಬ್ಬಿ, ಗುಂಟೂರು ತಳಿಯ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಂಡು ಬಂದಿದೆ.
ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ ಗರಿಷ್ಠ ದರ 65,000 ರೂ., ಸರಾಸರಿ ದರ 41,809 ರೂ. ಇದೆ
ಗುಂಟೂರು ಮೆಣಸಿನಕಾಯಿ ಕ್ವಿಂಟಲ್ ಗೆ ಗರಿಷ್ಠ ದರ 18,209 ರೂ., ಸರಾಸರಿ ದರ 14,509 ರೂ. ಇದೆ.
ಕಡ್ಡಿ ಮೆಣಸಿನ ಕಾಯಿ ಕ್ವಿಂಟಲ್ ಗೆ ಗರಿಷ್ಟ ದರ 51,669 ರೂ., ಸರಾಸರಿ ದರ 37,009 ರೂ. ಇದೆ.