
ಕರ್ತವ್ಯದಿಂದ ಹಿಂತಿರುಗಿದ ಸೈನಿಕ ತಂದೆ, ತನ್ನ ಮಗನನ್ನು ಆಶ್ಚರ್ಯಗೊಳಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಾಲಕ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದ. ಈ ವೇಳೆ ಎಂಟ್ರಿ ಕೊಟ್ಟ ತಂದೆ, ಮಗನ ಜೊತೆಗೆ ಬಾಕ್ಸಿಂಗ್ ಕಿಕ್ ಕೊಟ್ಟಿದ್ದಾರೆ. ಅವನು ತನ್ನ ತರಬೇತುದಾರ ಎಂದು ಭಾವಿಸಿ ಕಿಕ್‌ಬಾಕ್ಸಿಂಗ್ ಪ್ರಾರಂಭಿಸುತ್ತಾನೆ. ಬಹುಶಃ ಆತನಿಗೆ ಧ್ವನಿ ಕೇಳಿ ಏನೋ ವಿಚಿತ್ರವಾಗಿ ಎಂದೆನಿಸಿತು ಎಂದು ತೋರುತ್ತದೆ. ಕೂಡಲೇ ತನ್ನ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿದ್ದಾನೆ. ತನ್ನ ತಂದೆಯನ್ನು ನೋಡುತ್ತಿದ್ದಂತೆ ಅವರನ್ನು ತಬ್ಬಿ ಜೋರಾಗಿ ಅತ್ತಿದ್ದಾನೆ.
ಈ ಭಾವುಕ ವಿಡಿಯೋವನ್ನು ಮೊದಲಿಗೆ ನ್ಯೂಸ್ 4 ನ್ಯಾಶ್ವಿಲ್ಲೆ ಹಂಚಿಕೊಂಡಿದೆ. ಅಪ್‌ಲೋಡ್ ಮಾಡಿದ ನಂತರ, ವಿಡಿಯೋ 10.5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ತಂದೆ-ಮಗನ ಭಾವುಕ ಕ್ಷಣದ ವಿಡಿಯೋವನ್ನು ನೋಡಿದ ನೆಟ್ಟಿಗರು ಕೂಡ ಕಂಬನಿ ಬೀರಿದ್ದಾರೆ.