ಮನೆಯಲ್ಲಿ ಮಕ್ಕಳು ಇದ್ದರೆ ಸಿಹಿ ತಿಂಡಿಗಳಿಗೆ ಬೇಡಿಕೆ ಜಾಸ್ತಿ. ಬೇಗನೆ ಆಗಿಬಿಡುವಂತಹ ತಿಂಡಿ ಇದ್ದರೆ ಮಾಡುವುದಕ್ಕೂ ಸುಲಭ. ಇಲ್ಲಿ ಮಕ್ಕಳು ಇಷ್ಟಪಡುವ ಮಿಲ್ಕ್ ಮಾಡುವ ವಿಧಾನ ಇದೆ ನೋಡಿ.
400 ಗ್ರಾಂ-ಕಂಡೆನ್ಸಡ್ ಮಿಲ್ಕ್, 500 ಗ್ರಾಂ-ಪನ್ನೀರ್, 2 ಟೇಬಲ್ ಸ್ಪೂನ್-ಹಾಲಿನ ಪುಡಿ, 1 ಟೀ ಸ್ಪೂನ್-ಏಲಕ್ಕಿ ಪುಡಿ, 1 ಟೇಬಲ್ ಸ್ಪೂನ್-ಬಾದಾಮಿ ಪೀಸ್, ಚಿಟಿಕೆ –ಕೇಸರಿ ದಳ.
ಮೊದಲಿಗೆ ಪನ್ನೀರ್ ಅನ್ನು ತುರಿದುಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಕಂಡೆನ್ಸಡ್ ಮಿಲ್ಕ್ ಹಾಕಿ ನಂತರ ತುರಿದ ಪನ್ನೀರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಕಂಡೆನ್ಸಡ್ ಮಿಲ್ಕ್ ಕರಗಿದ ಮೇಲೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ದಪ್ಪಗಾಗುತ್ತ ತಳಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.
ತುಪ್ಪ ಸವರಿದ ಒಂದು ತಟ್ಟೆಗೆ ಇದನ್ನು ಹಾಕಿ ಸಮತಟ್ಟು ಮಾಡಿಕೊಳ್ಳಿ. ಇದರ ಮೇಲೆ ಕತ್ತರಿಸಿದ ಟ್ರೈ ಫ್ರುಟ್ಸ್ ಹಾಗೂ ಕೇಸರಿ ದಳ ಸೇರಿಸಿ. ಇದು ತಣ್ಣಗಾದ ಮೇಲೆ ಕತ್ತರಿಸಿದರೆ ರುಚಿಯಾದ ಮಿಲ್ಕ್ ಕೇಕ್ ಸವಿಯಲು ರೆಡಿ.