ಬಾಳೆ ಹಣ್ಣಿನ ಪ್ಯಾನ್ ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಒಂದು ತಿನಿಸು. ಇದು ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ.
½ ಕಪ್ ಮೈದಾ ಹಿಟ್ಟು, 1 ಟೇಬಲ್ ಸ್ಪೂನ್ ಸಕ್ಕರೆ, 1 ಟಿ ಸ್ಪೂನ್ ಬೇಕಿಂಗ್ ಪೌಡರ್, ¼ ಕಪ್ ಹಾಲು, ಚಿಟಿಕೆ ಉಪ್ಪು, 3-ಬಾಳೆಹಣ್ಣು (ಹಿಚುಕಿ ಇಟ್ಟುಕೊಳ್ಳಿ)1/4 ಕಪ್ ತೆಂಗಿನಕಾಯಿ ಹಾಲು, 1 ಟೇಬಲ್ ಸ್ಪೂನ್ ಎಣ್ಣೆ., 1 ಮೊಟ್ಟೆ.
ಒಂದು ಬೌಲ್ ಗೆ ಬಾಳೆಹಣ್ಣು ಹಾಕಿ ಚೆನ್ನಾಗಿ ಹಿಚುಕಿ.
ಇನ್ನೊಂದು ಬೌಲ್ ಗೆ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ ಮೈದಾ ಹಿಟ್ಟಿಗೆ ಬೇಕಿಂಗ್ ಪೌಡರ್ ಉಪ್ಪು ಹಾಕಿ. ನಂತರ ಮೊಟ್ಟೆ, ಎಣ್ಣೆ, ಹಾಲು, ತೆಂಗಿನಕಾಯಿ ಹಾಲು, ಬಾಳೆಹಣ್ಣು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಒಂದು ಸೌಟಿನ ಸಹಾಯದಿಂದ ಸ್ವಲ್ಪ ಹಿಟ್ಟನ್ನು ಹಾಕಿ. ದಪ್ಪಗೆ ದೋಸೆ ರೀತಿ ಮಾಡಿ. ನಂತರ ಎರಡು ಕಡೆ ಚೆನ್ನಾಗಿ ಬೇಯಿಸಿಕೊಂಡರೆ ಪ್ಯಾನ್ ಕೇಕ್ ರೆಡಿ. ಟಾಪಿಂಗ್ ಗೆ ಬಾಳೆಹಣ್ಣನ್ನು ಕತ್ತರಿಸಿ ಹಾಕಿಕೊಳ್ಳಿ.