ದೇಶದಲ್ಲಿ 18 ರಿಂದ 44 ವರ್ಷದವರಿಗೂ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಮೂರನೆ ಅಲೆಯ ಭಯ ಮಕ್ಕಳಿಗೆ ಶುರುವಾಗಿರೋದ್ರಿಂದ ಲಸಿಕೆ ಇಲ್ಲದೇ ಮಕ್ಕಳ ಕತೆ ಏನು ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಭಾರತದಲ್ಲಿ ಮಕ್ಕಳ ಕೋವಿಡ್ ಲಸಿಕೆ ಮುಂದಿನ 8 – 10 ದಿನಗಳಲ್ಲಿ ಕೈ ಸೇರುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನ ಬೆಳಗಾವಿಯ ಪ್ರಸಿದ್ಧ ವೈದ್ಯ ಡಾ. ಅಮಿತ್ ಭಾತೆ ವ್ಯಕ್ತಪಡಿಸಿದ್ದಾರೆ.
ಜೈಕೋವ್ ಡಿ ಲಸಿಕೆ ತುರ್ತು ಬಳಕೆಗೆ ಅನುಮೋದನೆ ಕೋರಿ ಡಿಜಿಸಿಐಗೆ ಮನವಿ ಮಾಡಲಾಗಿದೆ. ಮಾರುಕಟ್ಟೆಗೆ ಯಾವಾಗ ಈ ಲಸಿಕೆ ಬರುತ್ತೆ ಅನ್ನೋದು ಮುಂದಿನ ವಾರದೊಳಗಾಗಿ ತಿಳಿಯಲಿದೆ. ಈ ಲಸಿಕೆಗೆ ತುರ್ತು ಅನುಮೋದನೆ ಸಿಕ್ಕಲ್ಲಿ 12 ರಿಂದ 18 ವರ್ಷದವರೂ ಲಸಿಕೆ ಅಭಿಯಾನಕ್ಕೆ ಒಳಪಡಲಿದ್ದಾರೆ.
ಗ್ರೀನ್ ಫಂಗಸ್ ಲಕ್ಷಣವೇನು….? ಯಾರನ್ನು ಹೆಚ್ಚು ಕಾಡಲಿದೆ ಈ ಶಿಲೀಂಧ್ರ…? ಇಲ್ಲಿದೆ ವಿವರ
ಜೈಕೋವ್ ಡಿ ಲಸಿಕೆ ಪ್ರಾಯೋಗಿಕ ಹಂತ ಪೂರ್ಣಗೊಳ್ಳಲು ಮುಂದಿನ ವರ್ಷ ಫೆಬ್ರವರಿವರೆಗೆ ಸಮಯಾವಕಾಶ ಹಿಡಿಯಬಹುದು. ಆದರೆ ಮೂರನೇ ಅಲೆ ಪ್ರಾರಂಭಗೊಳ್ಳುವ ಮುನ್ನವೇ ಜೈಕೋವ್ ಡಿ ಲಸಿಕೆ ತುರ್ತು ಬಳಕೆಗೆ ಅನುಮತಿ ಕೇಳಲಾಗಿದೆ.
ಬೆಳಗಾವಿಯ ಜೀವನರೇಖಾ ಆಸ್ಪತ್ರೆ ಸೇರಿದಂತೆ ದೇಶದ 20 ಕೇಂದ್ರಗಳಲ್ಲಿ ಈ ಮಕ್ಕಳ ಕೋವಿಡ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಫೆಬ್ರವರಿ ತಿಂಗಳಿನಿಂದ ಇಲ್ಲಿಯವರೆಗೆ ನಡೆದ ಪರೀಕ್ಷೆಗಳಲ್ಲಿ ಯಾವುದೇ ಮಕ್ಕಳಲ್ಲಿ ತೊಂದರೆ ಕಂಡುಬಂದಿಲ್ಲ. ಲಸಿಕೆ ಪಡೆದ ಮಕ್ಕಳಲ್ಲಿ ಯಾವುದೇ ಸೈಡ್ ಎಫೆಕ್ಟ್ ಕಂಡು ಬರದ ಹಿನ್ನೆಲೆ ಶೀಘ್ರದಲ್ಲೇ ಈ ಲಸಿಕೆಗೆ ತುರ್ತು ಅನುಮೋದನೆ ಸಿಗುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಿದ್ರು.