alex Certify ಮಕ್ಕಳೇ ‘ದಸರಾ ರಜೆ’ ಅಂತ್ಯ : ರಾಜ್ಯಾದ್ಯಂತ ಅ.21 ರಿಂದ ಶಾಲೆಗಳು ಪುನಾರಂಭ |School Re-Opening | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳೇ ‘ದಸರಾ ರಜೆ’ ಅಂತ್ಯ : ರಾಜ್ಯಾದ್ಯಂತ ಅ.21 ರಿಂದ ಶಾಲೆಗಳು ಪುನಾರಂಭ |School Re-Opening

ಬೆಂಗಳೂರು: ಅಕ್ಟೋಬರ್ 3 ರಿಂದ ಶಾಲಾ ಮಕ್ಕಳಿಗೆ ನೀಡಿದ್ದ ‘ದಸರಾ ರಜೆ’ ಅಂತ್ಯಗೊಂಡಿದ್ದು, ರಾಜ್ಯಾದ್ಯಂತ ಅ.21 ರಿಂದ ಶಾಲೆಗಳು ಪುನಾರಂಭಗೊಳ್ಳಲಿದೆ.

ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20ರವರೆಗೆ ದಸರಾ ರಜೆ ಘೋಷಣೆ ಮಾಡಿತ್ತು, ಒಟ್ಟು 17 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಸಿಕ್ಕಿತ್ತು. ರಜೆಯ ಮಜಾ ನಾಳೆಗೆ ಅಂತ್ಯಗೊಳ್ಳಲಿದ್ದು, ರಾಜ್ಯಾದ್ಯಂತ ಅ.21 ರಿಂದ ಸೋಮವಾರದಿಂದ ಶಾಲೆಗಳು ಪುನಾರಂಭಗೊಳ್ಳಲಿದೆ.

ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ 2024-25ನೇ ದಸರಾ ರಜೆ ಆರಂಭವಾಗಿತ್ತು. ಅಕ್ಟೋಬರ್ 21ರಿಂದ ಎರಡನೇ ಅವಧಿ ಆರಂಭವಾಗಲಿದ್ದು, 2025 ಏಪ್ರಿಲ್ 10ರವರೆಗೆ ಶಾಲೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿತ್ತು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...