ಮಕ್ಕಳಿಗೆ ಆರು ತಿಂಗಳು ತುಂಬುತ್ತಲೇ ಏನು ತಿನ್ನಿಸುವುದು ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಅಂಗಡಿಯಲ್ಲಿ ಸಿಗುವ ಮಕ್ಕಳ ಆಹಾರವನ್ನು ಕೊಡಲೊಲ್ಲದ ಪೋಷಕರಿಗೆ ಮನೆಯಲ್ಲಿ ಏನು ಕೊಡಬೇಕು ಎಂಬುದೇ ತಿಳಿದಿರಿವುದಿಲ್ಲ. ಅವರಿಗಾಗಿ ಕೆಲವು ಟಿಪ್ಸ್ ಗಳು.
6 ತಿಂಗಳು ಕಡ್ಡಾಯವಾಗಿ ತಾಯಿ ಹಾಲು ಕಾಲ ಕೊಟ್ಟ ಬಳಿಕ ದಿನಕ್ಕೊಂದು ಬಾರಿ ರಾಗಿ ಗೋಧಿ ಮಣ್ಣಿ ಯನ್ನು ಕೊಡಬಹುದು. ಇವೆರಡನ್ನೂ ಸ್ವಚ್ಛವಾಗಿ ತೊಳೆದು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ತುಂಡು ಬೆಲ್ಲ ಸೇರಿಸಿ ಹಾಲಿನೊಂದಿಗೆ ಕುದಿಸಿ ಮಕ್ಕಳಿಗೆ ತಿನ್ನಿಸಿ.
ಕ್ರಮೇಣ ಇದೇ ಮಿಶ್ರಣಕ್ಕೆ ಧಾನ್ಯ ಬೇಳೆಕಾಳುಗಳ ಹುಡಿಯನ್ನೂ ಸೇರಿಸಿಕೊಳ್ಳಿ. ಹಾಲಿಗೆ ತುಂಡು ಕ್ಯಾರೆಟ್, ಈರುಳ್ಳಿ, ಹೆಸರು ಬೇಳೆ ಸೇರಿಸಿ ಬೇಯಲು ಇಡಿ. ಬಳಿಕ ಕಾಲು ಕಪ್ ಅನ್ನ ಬೆರೆಸಿ ಕುದಿಸಿ ತಣಿದ ಬಳಿಕ ಮಿಕ್ಸಿಯಲ್ಲಿ ರುಬ್ಬಿ. ತಿನ್ನಲು ಕೊಡಿ. ಎಂಟು ತಿಂಗಳ ನಂತರ ಈ ಆಹಾರವನ್ನು ಕೊಡಬಹುದು.