ಕಣ್ಣುಗಳು ನಮ್ಮ ದೇಹದ ಅಮೂಲ್ಯವಾದ ಭಾಗಗಳು. ಕಣ್ಣುಗಳಿಲ್ಲದಿದ್ದರೆ ನಮ್ಮ ಬದುಕೇ ಅಪೂರ್ಣ. ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಕೂಡ ಕನ್ನಡಕ ಬರುತ್ತಿದೆ.
ಇದಕ್ಕೆ ಸಾಮಾನ್ಯ ಕಾರಣವೆಂದರೆ ಸ್ಕ್ರೀನ್ ಟೈಮ್. ಮೊಬೈಲ್ ಹಾಗೂ ಟಿವಿಯನ್ನು ಅತಿಯಾಗಿ ವೀಕ್ಷಿಸುವುದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೆಟ್ಟ ಆಹಾರ ಪದ್ಧತಿಯಿಂದಲೂ ಕಣ್ಣಿನ ದೃಷ್ಟಿ ಮಂದವಾಗುತ್ತದೆ. ಹಾಗಾಗಿ ಮಗುವಿಗೆ ಕನ್ನಡಕ ಬಂದಿದ್ದರೆ ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ಕೊಡಿ. ಈ ಮೂಲಕ ಕನ್ನಡಕದ ನಂಬರ್ ಕಡಿಮೆ ಮಾಡಬಹುದು, ದೃಷ್ಟಿಯನ್ನು ಹೆಚ್ಚಿಸಬಹುದು.
ಸೊಪ್ಪು-ತರಕಾರಿ
ಪಾಲಕ್, ಎಲೆಕೋಸು, ಸಾಸಿವೆ ಸೊಪ್ಪಿನಲ್ಲಿ ಲುಟೀನ್ ಮತ್ತು ಅನೇಕ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಈ ಎರಡೂ ಪೋಷಕಾಂಶಗಳು ಕಣ್ಣಿನ ರೆಟಿನಾಕ್ಕೆ ರಕ್ಷಣೆ ನೀಡುತ್ತವೆ. ಇದು ದೃಷ್ಟಿಯನ್ನೂ ಸುಧಾರಿಸುತ್ತದೆ.
ಕಿತ್ತಳೆ ಹಣ್ಣು
ಕಿತ್ತಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ಕೂಡ ಕಣ್ಣಿಗೆ ಪ್ರಯೋಜನಕಾರಿ. ಗೆಣಸು, ಕ್ಯಾರೆಟ್, ಮಾವಿನ ಹಣ್ಣು ಮತ್ತು ಏಪ್ರಿಕಾಟ್‌ಗಳಲ್ಲಿ ಬೀಟಾ ಕ್ಯಾರೋಟಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಕ್ಷೀಣಿಸುತ್ತಿರುವ ದೃಷ್ಟಿಯನ್ನು ಸುಧಾರಿಸುತ್ತದೆ. ವಿಶೇಷವಾಗಿ ರಾತ್ರಿ ಕುರುಡುತನ ಇದ್ದವರು ಇದನ್ನು ಸೇವಿಸಬೇಕು.
ಮೀನು
ಒಮೆಗಾ-3 ಕೊಬ್ಬಿನಾಮ್ಲಗಳು, ಸಾಲ್ಮನ್ ಮತ್ತು ಟ್ಯೂನ ಮೀನುಗಳಲ್ಲಿ ಕಂಡುಬರುತ್ತವೆ. ಈ ಕೊಬ್ಬಿನಾಮ್ಲಗಳು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇದು ಡ್ರೈನೆಸ್ ಅನ್ನು ಕಡಿಮೆ ಮಾಡುತ್ತದೆ. ರೆಟಿನಾಗೆ ಹಾನಿಯಾಗಿದ್ದಲ್ಲಿ ಬಹುಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹಣ್ಣುಗಳು
ಸ್ಟ್ರಾಬೆರಿ, ಕ್ರ್ಯಾನ್‌ಬೆರಿ, ಬ್ಲ್ಯಾಕ್‌ಬೆರಿಗಳು ಮತ್ತಿತರ ಬೆರ್ರಿ ಹಣ್ಣುಗಳು ಕಣ್ಣುಗಳಿಗೆ ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ಈ ಹಣ್ಣುಗಳು ದೃಷ್ಟಿ ಹೆಚ್ಚಿಸುವುದರ ಕಣ್ಣಿನ ಇತರ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
ಬಾಳೆಹಣ್ಣು
ಬಾಳೆಹಣ್ಣು ವಿಟಮಿನ್ ಎ ಮತ್ತು ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೂ ಮುಖ್ಯ. ವಿಟಮಿನ್ ಎ ಕಾರ್ನಿಯಾವನ್ನು ರಕ್ಷಿಸುತ್ತದೆ, ಇದು ಉತ್ತಮ ದೃಷ್ಟಿಗೆ ಅವಶ್ಯಕವಾಗಿದೆ.