ಸಾಮಾನ್ಯವಾಗಿ ಮಕ್ಕಳು ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಚಾಕೋಲೆಟ್ ಅಂದ್ರೆ ಮಕ್ಕಳಿಗೆ ಬಲು ಇಷ್ಟ. ಈ ಚಾಕೋಲೆಟ್ ಗೆ ಹಣ್ಣು ಸೇರಿಸಿ ತಯಾರಿಸಿದ್ರೆ ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳು ಖುಷಿಯಿಂದ ತಿನ್ನುತ್ತಾರೆ ಕೂಡ.
ಸ್ಟ್ರಾಬೆರಿ ಚಾಕೋಲೆಟ್ ಬಾರ್ ಗೆ ಬೇಕಾಗುವ ಪದಾರ್ಥ:
4-5 ಸ್ಟ್ರಾಬೆರಿ
1 ½ ಕಪ್ ಕಾಯಿ ತುರಿ
¼ ಕಪ್ ಮೇಪಲ್ ಸಿರಪ್
150 ಗ್ರಾಂ ಕೊಕೊನಟ್ ಕ್ರೀಂ
2 ಚಮಚ ತೆಂಗಿನ ಎಣ್ಣೆ
1 ಚಮಚ ವೆನಿಲಾ ಎಸೆನ್ಸ್
200 ಗ್ರಾಂ ಕಪ್ಪು ಚಾಕೋಲೆಟ್
ಸ್ಟ್ರಾಬೆರಿ ಚಾಕೋಲೆಟ್ ಬಾರ್ ಮಾಡುವ ವಿಧಾನ :
ಸ್ವಲ್ಪ ಸಮಯ ಸ್ಟ್ರಾಬೆರಿಯನ್ನು ಫ್ರೀಜರ್ ನಲ್ಲಿಡಿ. ಇನ್ನೊಂದು ಪಾತ್ರೆಯಲ್ಲಿ ತೆಂಗಿನ ಕಾಯಿ ತುರಿ, ಮೇಪಲ್ ಸಿರಪ್, ಕೊಕೊನೆಟ್ ಕ್ರೀಂ, ವೆನಿಲಾ ಎಸೆನ್ಸ್ ಹಾಗೂ ತೆಂಗಿನ ಎಣ್ಣೆಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ.
ನಂತ್ರ ಸ್ಟ್ರಾಬೆರಿಯನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಹಾಕಿ. ಸಣ್ಣ ಚಾಕೋಲೆಟ್ ಆಕಾರದಲ್ಲಿ ಬಾರ್ ತಯಾರಿಸಿಕೊಳ್ಳಿ. ಇದನ್ನು ಸ್ವಲ್ಪ ಸಮಯ ಫ್ರೀಜರ್ ನಲ್ಲಿಡಿ.
ಇತ್ತ ಚಾಕೋಲೆಟ್ನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ. ಓವನ್ ಮೂಲಕವೂ ಚಾಕಲೇಟನ್ನು ಕರಗಿಸಿಕೊಳ್ಳಬಹುದು. ನಂತ್ರ ಫ್ರೀಜರ್ ನಿಂದ ಬಾರ್ಸ್ ತೆಗೆದು ಒಂದೊಂದರ ಮೇಲೆ ಚಾಕೋಲೆಟ್ ರಸವನ್ನು ಹಾಕಿ, ಮತ್ತೆ ಫ್ರೀಜರ್ ನಲ್ಲಿಡಿ. ಸ್ವಲ್ಪ ಸಮಯದ ನಂತ್ರ ಫೀಜರ್ ನಿಂದ ತೆಗೆದು ಸರ್ವ್ ಮಾಡಿ.