alex Certify ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಬೇಕಾಗುತ್ತದೆ ಕೆಲ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಬೇಕಾಗುತ್ತದೆ ಕೆಲ ಸಂಗತಿ

ಮಕ್ಕಳ ಭವಿಷ್ಯ ಪಾಲಕರಿಗೆ ಬಹಳ ಮುಖ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಹಾಗೆ ಪಾಲಕರು ಕಲಿಸಿದ ಪಾಠವನ್ನು, ಮಕ್ಕಳು ಮುಂದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪಾಲಕರು ಬಯಸ್ತಾರೆ. ಇದೇ ಕಾರಣಕ್ಕೆ ಮಕ್ಕಳಿಗೆ ಅನೇಕ ವಿಷ್ಯಗಳನ್ನು ಕಲಿಸುವ ಪ್ರಯತ್ನ ಮಾಡ್ತಾರೆ. ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಬಯಸುವ ಪಾಲಕರು ಕೆಲವೊಂದು ವಿಷ್ಯಗಳನ್ನು ಪಾಲನೆ ಮಾಡಬೇಕಾಗುತ್ತದೆ. ಮಕ್ಕಳಿಗೆ ಕೆಲ ಸಂಗತಿಯನ್ನು ಕಲಿಸಬೇಕಾಗುತ್ತದೆ.

ದಯವಿಟ್ಟು ಪದ ಬಳಕೆ : ಮಕ್ಕಳಿಗೆ ಬಾಲ್ಯದಿಂದಲೇ ದಯವಿಟ್ಟು, ಪ್ಲೀಸ್ ಪದವನ್ನು ಕಲಿಸಿ. ಯಾರಿಗಾದರೂ ಏನನ್ನಾದರೂ ಕೇಳಲು ಅಥವಾ ಹೇಳುವ ಮೊದಲು ದಯವಿಟ್ಟು ಪದವನ್ನು ಬಳಸುವಂತೆ ಹೇಳಿ. ಇದು ಮಕ್ಕಳ ಇಮೇಜ್ ಮಾತ್ರವಲ್ಲ ಪಾಲಕರ ಇಮೇಜ್ ಕೂಡ ಹೆಚ್ಚಾಗುತ್ತದೆ.

ಧನ್ಯವಾದ ಹೇಳಲು ಕಲಿಸಿ :  ಧನ್ಯವಾದ ಎಂಬುದು ಸಣ್ಣ ಪದವಲ್ಲ. ಚಿಕ್ಕ ಕೆಲಸದ ನಂತ್ರವೂ ಧನ್ಯವಾದ ಹೇಳಲು ಮಕ್ಕಳಿಗೆ ಕಲಿಸಿ. ಯಾರಿಂದಲಾದರೂ ಸಹಾಯ ಅಥವಾ ಏನನ್ನಾದರೂ ಪಡೆದಾಗ ಅವರಗೆ ಧನ್ಯವಾದ ಹೇಳುವಂತೆ ಹೇಳಿ. ಧನ್ಯವಾದದ ಅರ್ಥವನ್ನು ಮಕ್ಕಳಿಗೆ ತಿಳಿಸಿ.

ಕ್ಷಮಿಸಿ ಪದ ಕಲಿಸಿ: ಅನೇಕ ಮಕ್ಕಳು, ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ತಪ್ಪು ಮಾಡಿಲ್ಲವೆಂದು ವಾದ ಮಾಡುತ್ತಾರೆ. ಆದ್ರೆ ತಪ್ಪನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ. ತಪ್ಪನ್ನು ಒಪ್ಪಿಕೊಳ್ಳುವ ಜೊತೆಗೆ ಕ್ಷಮೆ ಕೇಳಬೇಕು. ಸಣ್ಣ ತಪ್ಪಿಗೂ ಸಹ ಕ್ಷಮೆ ಕೇಳುವುದನ್ನ ಮಕ್ಕಳಿಗೆ ಮನವರಿಕೆ ಮಾಡಿ.

ಅನುಮತಿ ಕೇಳಲು ಕಲಿಸಿ : ಮಕ್ಕಳಿಗೆ ಬಾಲ್ಯದಿಂದಲೇ ಅನುಮತಿ ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಸಬೇಕು. ಯಾವುದೇ ಕೆಲಸ ಮಾಡಲು ಪೋಷಕರ ಅನುಮತಿ ಅಗತ್ಯ ಎಂಬುದು ಮಕ್ಕಳಿಗೆ ಗೊತ್ತಿರಲಿ. ಬೇರೆಯವರ ವಸ್ತುಗಳನ್ನು ಮುಟ್ಟಲು ಅಥವಾ ಬಳಸುವ ಮೊದಲು ಅನುಮತಿ ಪಡೆಯಬೇಕಾಗುತ್ತದೆ ಎಂಬುದನ್ನು ಮಕ್ಕಳಿಗೆ ಕಲಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...