ಮನೆಗೆ ಯಾರಾದರೂ ನೆಂಟರು ದಿಢೀರ್ ಅಂತಾ ಬಂದರೆ, ಇಲ್ಲಾ ಮಕ್ಕಳು ಏನಾದರೂ ತಿನ್ನುವುದಕ್ಕೆ ಬೇಕು ಅಂತಾ ಹಠ ಮಾಡಿದರೆ, ಅವರನ್ನು ಸಂತೋಷಗೊಳಿಸಲು ರುಚಿರುಚಿಯಾದ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಸ್ವೀಟ್ ಅಂದರೆ ಕೋಕೋನಟ್ ಲಡ್ಡು. ಈ ಲಡ್ಡು ತಯಾರಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಹಾಗಾದರೆ ಈ ಫಟಾಫಟ್ ಕೋಕೋನಟ್ ಲಡ್ಡು ಮಾಡುವುದು ಹೇಗೆ ಅಂತ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು
ಒಣ ಕೊಬ್ಬರಿ ಪುಡಿ – 100 ಗ್ರಾಂ
ಕಂಡೆನ್ಸ್ ಮಿಲ್ಕ್ (ಮಿಲ್ಕ್ ಮೇಡ್)
ಏಲಕ್ಕಿ ಪುಡಿ
ಮಾಡುವ ವಿಧಾನ
ಒಣ ಕೊಬ್ಬರಿಯನ್ನು ಸಣ್ಣಗೆ ತುರಿದಿಟ್ಟುಕೊಳ್ಳಬೇಕು. ತುರಿದ ಕೊಬ್ಬರಿ ಪುಡಿಗೆ ಅಗತ್ಯವಿರುವಷ್ಟು ಕಂಡೆನ್ಸ್ ಮಿಲ್ಕ್ ಹಾಗೂ ಏಲಕ್ಕಿ ಪುಡಿ ಹಾಕಿಕೊಂಡು ಲಾಡುವಿನ ರೀತಿಯಲ್ಲಿ ಉಂಡೆ ಕಟ್ಟಬೇಕು.
ಎಷ್ಟು ಬೇಕೋ ಅಷ್ಟು ಉಂಡೆ ಕಟ್ಟಿದ ನಂತರ ಮತ್ತೊಮ್ಮೆ ಚೆನ್ನಾಗಿ ಒಣ ಕೊಬ್ಬರಿ ಪುಡಿಯಲ್ಲಿ ಉಂಡೆಗಳನ್ನು ಹೊರಳಿಸಬೇಕು ಅಷ್ಟೇ. ಬೇಕಿದ್ದರೆ ಉಂಡೆಗಳ ಮೇಲೆ ಚೆರಿ ಹಣ್ಣು ಇಡಬಹುದು.
ಇಷ್ಟು ಮಾಡಿದರೆ ದಿಢೀರ್ ಅಂತಾ ಸ್ವಾದಿಷ್ಟ ಕೋಕೋನಟ್ ಲಡ್ಡು ರೆಡಿಯಾಗುತ್ತದೆ.