ಚೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳಿಗೆ ಸ್ನ್ಯಾಕ್ಸ್ ಟೈಮ್ ನಲ್ಲಿ ಚೀಸ್ ನಿಂದ ರುಚಿಕರವಾದ ಕುಕ್ಕೀಸ್ ಮಾಡಿಕೊಡಬಹುದು. ಇದರಿಂದ ಮಕ್ಕಳು ಖುಷಿಯಾಗುತ್ತಾರೆ.
2 ಟೇಬಲ್ ಸ್ಪೂನ್ ತುರಿದ ಪ್ರೊಸೆಸ್ಡ್ ಚೀಸ್, ½ ಕಪ್-ಬೆಣ್ಣೆ, ಚಿಟಿಕೆ-ಖಾರದ ಪುಡಿ, ಚಿಟಿಕೆ-ಉಪ್ಪು, 1 ಕಪ್- ಮೈದಾ.
ಮೊದಲಿಗೆ ಬೆಣ್ಣೆಯನ್ನು ಒಂದು ಬೌಲ್ ಗೆ ಹಾಕಿಕೊಂಡು ಅದನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಇದು ಕ್ರೀಂನ ಹದಕ್ಕೆ ಬರಲಿ. ನಂತರ ಇದಕ್ಕೆ ಚೀಸ್, ಖಾರದಪುಡಿ, ಉಪ್ಪು ಹಾಕಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ.
ಮೈದಾ ಹಿಟ್ಟನ್ನು ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಾದಿಕೊಂಡು ಒಂದು ತಟ್ಟೆ ಮುಚ್ಚಿ 15 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಡಿ.
ನಂತರ ಹೊರಕ್ಕೆ ತೆಗೆದು ಚಪಾತಿ ಮಣೆಯ ಮೇಲೆ ಸ್ವಲ್ಪ ಮೈದಾ ಹಿಟ್ಟು ಉದುರಿಸಿ ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ. ತೀರಾ ತೆಳು ಮಾಡಬೇಡಿ.
ನಂತರ ಕುಕ್ಕಿ ಕಟರ್ ಅಥವಾ ವೃತ್ತಾಕಾರದ ಬೌಲ್ ನ ಸಹಾಯದಿಂದ ಲಟ್ಟಿಸಿಕೊಂಡ ಚಪಾತಿಯನ್ನು ವೃತ್ತಾಕಾರದಲ್ಲಿ ಕುಕ್ಕಿಸ್ ರೀತಿ ಕತ್ತರಿಸಿಕೊಳ್ಳಿ.
ಬೇಕಿಂಗ್ ಟ್ರೇ ಗೆ ತುಪ್ಪ ಸವರಿ ಅದನ್ನು ಒವೆನ್ ನಲ್ಲಿ ಪ್ರಿ ಹೀಟ್ ಮಾಡಿಕೊಂಡು ನಂತರ ಕುಕ್ಕಿಸ್ ಅನ್ನು ಅದರ ಮೇಲೆ ಇಟ್ಟು 15 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಬಹುದು.