ಕೊಪ್ಪಳ: ನಾನೆಂದೂ ಜಾತಿ ಭೇದ ಮಾಡಿಲ್ಲ. ಜಾತಿ ಭೇದ ಮಾಡುವುದೂ ಇಲ್ಲ. ಯಾರೇ ಜಾತಿ ಭೇದ ಮಾಡಿದರೂ ಅವರ ಮಕ್ಕಳು ಹುಳ ಬಿದ್ದು ಸಾಯುತ್ತಾರೆ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಕಾರ್ಮಿಕರಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜಕಾರಣದಲ್ಲಿ ಯಾರು ಜಾತಿಯತೆ ಮಾಡುತ್ತಾರೋ ಅವರ ಮಕ್ಕಳಿಗೆ ಹುಳ ಬೀಳುತ್ತವೆ ಎಂದು ಹೇಳಿದ್ದಾರೆ.
ನಾನಂತೂ ಇದುವರೆಗೂ ಜಾತಿ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ರಾಜಕಾರಣದಲ್ಲಿ ಜಾತಿಯತೆ ಮಾಡಿದರೆ ನನ್ನ ಮಕ್ಕಳಿಗೆ ಹುಳ ಬೀಳುತ್ತವೆ. ಯಾರು ಎಂದಿಗೂ ರಾಜಕಾರಣದಲ್ಲಿ ಜಾತಿಯನ್ನು ತರಬಾರದು. ನಾವೆಲ್ಲ ಬಡವರ ಪರವಾಗಿರಬೇಕು. ರಾಜಕಾರಣದಲ್ಲಿ ಜಾತಿಯತೆ ಹೋಗಿ ಬಡವರ ಕಲ್ಯಾಣವಾಗಬೇಕು ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಜಾತಿಯ ಪರವಾಗಿ ರಾಜಕಾರಣ ಬಳಸಿಕೊಳ್ಳಬಾರದು. ಹಾಗೆ ಮಾಡಿದವರ ಮಕ್ಕಳ ಕಾಲಿಗೆ ಹುಳ ಮೆತ್ತಿಕೊಳ್ಳುತ್ತವೆ. ರಾಜಕೀಯದಲ್ಲಿ ಇರುವವರು ಜಾತಿ ಮಾಡಬಾರದು, ಜಾತಿ ಮಾಡಬೇಕಾಗಿದ್ದರೆ ರಾಜಕೀಯಕ್ಕೆ ಬರಬಾರದು ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.