ನವದೆಹಲಿ: ಎರಡು ವರ್ಷಕ್ಕಿಂತ ಮೇಲ್ಪಟ್ಟ ಸಣ್ಣ ಮಕ್ಕಳಿಗೆ ಮೂಗಿನ ಮೂಲಕ ಕೋವಿಡ್ ಲಸಿಕೆ ನೀಡಲಾಗುತ್ತದೆ. ಮೂಗಿನಲ್ಲಿ ಹನಿ ರೂಪದಲ್ಲಿ ಹಾಕುವ ಕಂಡುಹಿಡಿಯಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಬಯೋಟೆಕ್ ಕಂಪನಿ ಈ ಸಂಬಂಧ ಸಂಶೋಧನೆ ಕೈಗೊಂಡಿದ್ದು, ಅಂತಿಮ ಹಂತ ತಲುಪಿದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು, ಮಾನ್ಯತೆ ದೊರೆತ ಕೂಡಲೇ ಲಸಿಕೆಯನ್ನು ಇಂಜೆಕ್ಷನ್ ನೀಡುವ ಬದಲು ನೇಸಲ್ ಡ್ರಾಪ್ ಮೂಲಕ ನೀಡಲಾಗುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.