ಕೋವಿಡ್ ಬಳಿಕ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಹಿರಿಯರಷ್ಟೇ ಅಲ್ಲ ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೃದಯವು ದೇಹದ ಉಳಿದ ಭಾಗಗಳಿಗೆ ಸರಿಯಾಗಿ ರಕ್ತ ಪೂರೈಕೆ ಮಾಡದೇ ಇದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯನ್ನು ಹೃದಯ ಸ್ತಂಭನ ಎಂದು ಕರೆಯಲಾಗುತ್ತದೆ, ಸಾಮಾನ್ಯವಾಗಿ ಕಾರ್ಡಿಯಾಕ್ ಅರೆಸ್ಟ್ ಬಳಿಕ ವ್ಯಕ್ತಿ ಬದುಕುವ ಸಾಧ್ಯತೆ ತೀರಾ ಕಡಿಮೆ. ಈ ರೀತಿಯ ಸಮಸ್ಯೆ ಮಕ್ಕಳಲ್ಲಿ ಉದ್ಭವಿಸುತ್ತಿರುವುದಕ್ಕೆ ಕಾರಣಗಳೇನು? ಸಾವು ಸಂಭವಿಸದಂತೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣ
ಹಠಾತ್ ಗಾಯ – ಅನೇಕ ಬಾರಿ ಮಕ್ಕಳಿಗೆ ಎದೆಯಲ್ಲಿ ಗಾಯವಾದರೆ ಅದು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ದೇಹಕ್ಕೆ ರಕ್ತದ ಪೂರೈಕೆ ನಿಂತು, ಹೃದಯ ಸ್ತಂಭನಕ್ಕೆ ಒಳಗಾಗಬಹುದು. ಅನೇಕ ಬಾರಿ ನವಜಾತ ಶಿಶು ಮಲಗಿದ್ದಲ್ಲೇ ಸಾವನ್ನಪ್ಪುತ್ತದೆ, ನಿದ್ದೆ ಮಾಡುವಾಗ ಬದಿಯನ್ನು ಬದಲಾಯಿಸುವುದು ಮತ್ತು ಉಸಿರಾಟ ನಿಲ್ಲಿಸುವುದು ಇದಕ್ಕೆ ಕಾರಣ.
ಹೃದಯದ ಮೇಲೆ ಒತ್ತಡ – ಆರೋಗ್ಯ ತಜ್ಞರ ಪ್ರಕಾರ ನವಜಾತ ಶಿಶುವಿಗೆ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಕಾಯಿಲೆಗಳ ಅಪಾಯವಿದ್ದರೆ ಪೋಷಕರು ಎಚ್ಚರಿಕೆ ವಹಿಸಬೇಕು. ಮಕ್ಕಳಲ್ಲಿ ಸೋಂಕಿನ ಹಠಾತ್ ಹೆಚ್ಚಳದಿಂದಾಗಿ, ಹೃದಯದ ಮೇಲೆ ಒತ್ತಡ ಬರುತ್ತದೆ. ಇದರಿಂದಾಗಿ ಹೃದಯ ಸ್ತಂಭನ ಸಂಭವಿಸುತ್ತದೆ.
ಜನ್ಮಜಾತ ರೋಗಗಳು – ಕೆಲವು ಮಕ್ಕಳು ಹುಟ್ಟಿನಿಂದಲೇ ಹೃದಯದಲ್ಲಿ ಕೆಲವು ಕೊರತೆಗಳನ್ನು ಹೊಂದಿರುತ್ತಾರೆ. ಉಸಿರಾಟದ ಕಾಯಿಲೆಗಳಿರುತ್ತವೆ. ಈ ಸ್ಥಿತಿಯನ್ನು ಜನ್ಮಜಾತ ಹೃದಯ ದೋಷ ಎಂದು ಕರೆಯಲಾಗುತ್ತದೆ. ಹೃದಯದಲ್ಲಿ ಈ ಅಡಚಣೆಯಿಂದಾಗಿ, ರಕ್ತವನ್ನು ಸರಿಯಾಗಿ ಪೂರೈಸಲು ಸಾಧ್ಯವಾಗುವುದಿಲ್ಲ. ಇದು ಹೃದಯಾಘಾತ ಅಥವಾ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ.
ಹೃದಯಾಘಾತದ ಸಂದರ್ಭದಲ್ಲಿ ಏನು ಮಾಡಬೇಕು ?
ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅಂಗೈಗಳನ್ನು ಎದೆಯ ಮೇಲಿರಿಸಿ ನೆಲದ ಮೇಲೆ ನೇರವಾಗಿ ಮಲಗಿಸಿ CPR ನೀಡಿ. ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಮತ್ತು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿ. ಜೋರಾಗಿ ಕೂಗಿ ಕೂಗಿ ಕರೆದು ಮಗುವಿನೊಂದಿಗೆ ಮಾತನಾಡಲು ಪ್ರಯತ್ನಿಸಿ. ಸಮಯಕ್ಕೆ ಸರಿಯಾಗಿ ಅಲರ್ಟ್ ಆದಾಗ ಮಾತ್ರ ಮಗುವನ್ನು ರಕ್ಷಿಸಬಹುದು.