alex Certify ಗುಡ್ ನ್ಯೂಸ್: 18 ವರ್ಷದೊಳಗಿನ ಮಕ್ಕಳ ಪೋಷಣೆಗೆ ಮಾಸಿಕ 1 ಸಾವಿರ ರೂ. ಭತ್ಯೆಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: 18 ವರ್ಷದೊಳಗಿನ ಮಕ್ಕಳ ಪೋಷಣೆಗೆ ಮಾಸಿಕ 1 ಸಾವಿರ ರೂ. ಭತ್ಯೆಗೆ ಅರ್ಜಿ ಆಹ್ವಾನ

ಮಡಿಕೇರಿ: ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸಲು ಹಾಗೂ ಮಕ್ಕಳನ್ನು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣ ಮುಂದುವರಿಕೆಗೆ ಉತ್ತೇಜಿಸಲು ಪೋಷಣಾ ಭತ್ಯೆ ನೀಡಲಾಗುವುದು.

ಮಕ್ಕಳ ವೈದ್ಯಕೀಯ, ಪೌಷ್ಠಿಕ ಆಹಾರ, ಶೈಕ್ಷಣಿಕ ವೃತ್ತಿ ತರಬೇತಿ ಮತ್ತು ಇತರೆ ಅವಶ್ಯಕತೆ ಪೂರೈಸಲು ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ಬಾಲನ್ಯಾಯ(ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ರಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪ್ರಾಯೋಜಕತ್ವದಡಿ ಪಾಲನೆ ಮತ್ತು ಪೋಷಣೆ ಅಗತ್ಯವಿರುವ 0-18 ವರ್ಷದೊಳಗಿನ ಮಕ್ಕಳಿಗೆ ತಿಂಗಳಿಗೆ ರೂ. ಒಂದು ಸಾವಿರ ಗಳಂತೆ 3 ವರ್ಷಗಳವರೆಗೆ ಒಂದು ಕುಟುಂಬದ ಗರಿಷ್ಠ 2 ಮಕ್ಕಳಿಗೆ ಪೋಷಣಾ ಭತ್ಯೆ ನೀಡುವ ಕಾರ್ಯಕ್ರಮಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ತಂದೆ/ ಕುಟುಂಬದ ದುಡಿಯುವ ಸದಸ್ಯರನ್ನು ಕಳೆದುಕೊಂಡಿದ್ದಲ್ಲಿ, ತಂದೆ ತಾಯಿ ಇಲ್ಲದ ಮಕ್ಕಳಿಗೆ, ತಂದೆ ತಾಯಿಗಳು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದಲ್ಲಿ, ಕುಟುಂಬಕ್ಕೆ ಆಧಾರವಾಗಿದ್ದ ಪೋಷಕರು ಜೈಲಿನಲ್ಲಿದ್ದರೆ, ಅಂತಹ ಕುಟುಂಬದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...