ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ 60 ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ.
ಸುಮಾರು 500 ವರ್ಷಗಳ ಕಾಯುವಿಕೆ ಇಂದು ಅಂತ್ಯಗೊಂಡಿದ್ದು, ಇಂದು ಐತಿಹಾಸಿಕ ರಾಮಮಂದಿರ ಉದ್ಘಾಟನೆ ನೆರವೇರಿದೆ. ಬೆಂಗಳೂರಿನಲ್ಲಂತೂ ಹೆರಿಗೆ ಕ್ರೇಜ್ ಜೋರಾಗಿದ್ದು, ರಾಮಮಂದಿರ ಪ್ರತಿಷ್ಟಾಪನೆ ದಿನವೇ ಮಕ್ಕಳನ್ನು ಹೆರಲು ಗರ್ಭಿಣಿಯರು ಆಸಕ್ತಿ ವಹಿಸಿದ್ದರು. ರಾಮಲಲ್ಲಾ ಪ್ರತಿಷ್ಠಾಪನೆಯ ಶುಭ ದಿನವೇ ನಾರ್ಮಲ್ , ಸಿಸೇರಿಯನ್ ಮೂಲಕ 60 ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ.
ವಾಣಿವಿಲಾಸ್ ಆಸ್ಪತ್ರೆಯಲ್ಲಿ 28, ಕೆಸಿ ಜನರಲ್ ಆಸ್ಪತ್ರೆಯಲ್ಲಿ 4 , ಘೋಷಾ ಆಸ್ಪತ್ರೆಯಲ್ಲಿ 6 , ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 25 ಕ್ಕೂ ಅಧಿಕ ಮಕ್ಕಳು ಜನಿಸಿದ್ದಾರೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆ ಹಲವು ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ ಕೂಡ ಘೋಷಣೆ ಮಾಡಲಾಗಿತ್ತು. ರಾಮಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಮಹಿಳೆಯರು ಬಹಳ ಆಸಕ್ತಿ ವಹಿಸಿದ್ದರು.