ಹೈದರಾಬಾದ್: ಹೈದರಾಬಾದ್‌ನಲ್ಲಿ 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರನ್ನು ಸ್ಮರಿಸುವ ‘ಸಮಾನತೆಯ ಪ್ರತಿಮೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಗುವೊಂದು ಪ್ರಧಾನಿ ಪಾದ ಮುಟ್ಟಿದೆ.
‘ದಂಡವತ್ ಪ್ರಣಾಮ್’ ಮಾಡುವಾಗ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದವನ್ನು ಪಡೆದುಕೊಂಡಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮಗುವನ್ನು ಎತ್ತಲು ಮೋದಿ ಮುಂದಾಗಿದ್ದಾರೆ. ಸ್ವತಃ ನಮಸ್ಕರಿಸುವ ವೇಳೆ ಪ್ರಧಾನಿಯವರಿಂದ ಆಶೀರ್ವಾದ ಪಡೆಯಲು ನಮಸ್ಕರಿಸುತ್ತಿರುವುದನ್ನು ಕಾಣಬಹುದು.
11 ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣೆಯಲ್ಲಿ 216 ಅಡಿ ಎತ್ತರದ ಸಮಾನತೆಯ ಪ್ರತಿಮೆ ನಿರ್ಮಿಸಲಾಗಿದೆ.