
ಮೈಸೂರು: ತಂದೆ-ತಾಯಿಯೇ ಪುಟ್ಟ ಹೆಣ್ಣು ಮಗುವನ್ನು 14,000 ರೂಪಾಯಿಗೆ ಮರಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನೀಲಕಂಠನಗರದಲ್ಲಿ ನಡೆದಿದೆ.
ದಂಪತಿಗೆ ಮೂರು ಹೆಣ್ಣುಮಕ್ಕಳಿದ್ದಾರೆ. ಹಾಗಾಗಿ ಕೊನೆಯ ಹೆಣ್ಣುಮಗುವನ್ನು ಮಾರಾಟಕ್ಕೆ ನಿರ್ಧರಿಸಿ 14 ಸಾವಿರಕ್ಕೆ ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಮಾರಿದ್ದಾರೆ. ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದರು.
ಮಗು ಖರೀದಿಸಿದವರನ್ನು ಸಂಪರ್ಕಿಸಿದಾಗ 14 ಸಾವಿರ ರೂ ಕೊಟ್ಟು ಮಗು ಪಡೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ನಾವು ಕೊಟ್ಟ ಹಣ ವಾಪಾಸ್ ಕೊಟ್ಟರೆ ಮಗುವನ್ನು ಹಿಂದಿರುಗಿಸುತ್ತೇವೆ ಎಂದಿದ್ದಾರೆ. ಸದ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಗುವನ್ನು ರಕ್ಷಿಸಿ ಕರೆತಂದಿದ್ದಾರೆ.
ಆದರೆ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಮಧ್ಯವರ್ತಿಗಳ ಮೂಲಕವೇ ಮಗುವನ್ನು ಕರೆತರಲಾಗಿದೆ ಎಂದು ತಿಳಿದುಬಂದಿದೆ.