ರಾಮನಗರ: ಯಾರಿಗೂ ತಿಳಿಯಲ್ಲ ಎಂದುಕೊಂಡು ಮೊಬೈಲ್ ನಲ್ಲಿ ಮಕ್ಕಳ ಅಶ್ಲೀ ದೃಶ್ಯ ವೀಕ್ಷಣೆ, ಡೌನ್ಲೋಡ್ ಹಂಚಿಕೆ ಮಾಡುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮೊಬೈಲ್ ದೃಶ್ಯ ವೀಕ್ಷಣೆ ಮೇಲೆ ಕೇಂದ್ರ ಸರ್ಕಾರ ನಿಗಾ ವಹಿಸಿದೆ. ಎನ್ಸಿಎಂಇಸಿ ವಿಭಾಗ ನಿಮ್ಮ ಮೊಬೈಲ್ ಮೇಲೆ ಮತ್ತು ಇತರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ.
ರಾಮನಗರ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ದೃಶ್ಯಗಳ ವೀಕ್ಷಣೆ ಮತ್ತು ಡೌನ್ಲೋಡ್ ಮಾಡಿಕೊಂಡ ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ವ್ಯಾಪ್ತಿಯ ಎನ್ಸಿಎಂಇಸಿ(ರಾಷ್ಟ್ರೀಯ ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರ) ಮಕ್ಕಳ ಅಶ್ಲೀಲ ಚಿತ್ರಗಳು ಆನ್ಲೈನ್ ನಲ್ಲಿ ಬಿತ್ತರವಾಗುವುದನ್ನು ತಡೆಯಲು ತೀವ್ರ ನಿಗಾ ವಹಿಸಿದೆ.
ಮೊಬೈಲ್ ನಲ್ಲಿ ಆನ್ಲೈನ್ ಪೋರ್ನ್ ಸೈಟ್ ಗಳ ಮೂಲಕ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ, ಡೌನ್ಲೋಡ್ ಮಾಡಿದ ಮತ್ತು ಅಪ್ಲೋಡ್ ಮಾಡಿದ ವ್ಯಕ್ತಿಗಳ ವಿವರ, ಐಪಿ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಮಾಹಿತಿ ಸಂಗ್ರಹಿಸಿ ಅದನ್ನು ಸಿಐಡಿ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಸಿಐಡಿ ಐಟಿ ಸೆಲ್ ವಿಭಾಗದ ಅಧಿಕಾರಿಗಳು ಅದನ್ನು ಪರಿಶೀಲಿಸಿ ಜಿಲ್ಲಾ ಸೈಬರ್ ಘಟಕಕ್ಕೆ ಕಳುಹಿಸಿಕೊಡುತ್ತಾರೆ. ಇಂತಹ ಕೃತ್ಯವೆಸಗಿದವರಿಗೆ 5 ವರ್ಷದವರೆಗೆ ಜೈಲು ಶಿಕ್ಷೆ 10 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶವಿದೆ.