ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಅನೈತಿಕವಾಗಿ ಮದುವೆ ಪೂರ್ವದಲ್ಲಿ ಜನನವಾದ ಮಕ್ಕಳ ಸಾಗಾಣಿಕೆ ದಂಧೆ ನಡೆದಿರುವ ಅನುಮಾನ ವ್ಯಕ್ತವಾಗಿದೆ. ವಿಜಯಪುರದ ಅಥಣಿ ಗಲ್ಲಿ ನಿವಾಸಿಯಾಗಿರುವ ಚಡಚಣ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿರುವ ಮಹಿಳೆ ವಿರುದ್ಧ ಜಿಲ್ಲಾ ಮಕ್ಕಳ ಸಹಾಯವಾಣಿ ಯೋಜನಾ ನಿರ್ದೇಶಕರು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಸ್ಟಾಫ್ ನರ್ಸ್ ವಿಚಾರಣೆ ನಡೆಸಿದಾಗ ಐವರು ಮಕ್ಕಳನ್ನು ಅಕ್ರಮವಾಗಿ ಸಾಕಿರುವುದು ಬೆಳಕಿಗೆ ಬಂದಿದೆ. ಸ್ಟಾಫ್ ನರ್ಸ್ ಅನಧಿಕೃತವಾಗಿ 5 ವರ್ಷದ ಗಂಡುಮಗು ಮತ್ತು 3 ವರ್ಷದ ಹೆಣ್ಣು ಮಗುವನ್ನು ತನ್ನ ಮನೆಯಲ್ಲೇ ಸಾಕಿದ್ದು, ಉಳಿದ ಮಕ್ಕಳನ್ನು ಬೇರೆಯವರ ಬಳಿ ಕೊಟ್ಟಿದ್ದಾಳೆ. ಅಲ್ಲದೇ ಒಂದು ಮಗುವಿನ ಪಾಲನೆಗಾಗಿ ತಿಂಗಳಿಗೆ ಮೂರು ಸಾವಿರ ರೂಪಾಯಿ ಕೊಡುತ್ತಿಳೆನ್ನಲಾಗಿದೆ. ಕೆಲವರಿಗೆ ಹಣ ಕೊಡುತ್ತಿರಲಿಲ್ಲ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಮತ್ತೊಂದು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಿಟ್ಟಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.