alex Certify ಪೋಷಕರಿಗೇ ತಿಳಿಸದೇ ಬಾಲಕಿಗೆ ಬಾಲ್ಯ ವಿವಾಹ ಮಾಡಿದ ದೊಡ್ಡಪ್ಪ: ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರಿಗೇ ತಿಳಿಸದೇ ಬಾಲಕಿಗೆ ಬಾಲ್ಯ ವಿವಾಹ ಮಾಡಿದ ದೊಡ್ಡಪ್ಪ: ದೂರು

ಬೆಂಗಳೂರು: ಪೋಷಕರಿಗೆ ತಿಳಿಸದೆ ಬಾಲಕಿ ಮದುವೆ ಮಾಡಿಸಿದ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.

ಫೆಬ್ರವರಿ 15ರಂದು 14 ವರ್ಷದ ಬಾಲಕಿಯನ್ನು ಆಕೆಯ ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ 24 ವರ್ಷದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ತಂದೆ ತಾಯಿಗೆ ಈ ವಿಚಾರ ತಿಳಿಸದೆ ಅಪ್ರಾಪ್ತಳಾಗಿರುವ ಪುತ್ರಿಯನ್ನು ಪುಸಲಾಯಿಸಿ ಕೈವಾರದ ದೇವಾಲಯದಲ್ಲಿ ಮದುವೆ ಮಾಡಿಸಲಾಗಿದೆ.

ಬಾಲಕಿಯ ಮದುವೆ ಮಾಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಜಾಪುರ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...