ಹೊಸಕೋಟೆ: ಶಿಕ್ಷಣ ಹಾಗೂ ಆಧುನಿಕತೆ ಎಷ್ಟೇ ಬೆಳೆದರೂ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ಮಾತ್ರ ಇನ್ನೂ ನಿಂತಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನ ಸಮೀಪವೇ ಇಂತಹ ಪದ್ಧತಿ ಮುಂದುವರೆದಿರುವುದು ದುರ್ದೈವ. 15 ವರ್ಷದ ಬಾಲಕಿಗೆ ಪೋಷಕರೇ ಮದುವೆಗೆ ಸಿದ್ಧತೆ ನಡೆಸಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಪೋಷಕರು 15 ವರ್ಷದ ಬಾಲಕಿಗೆ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ಅರಿಷಿಣ ಶಾಸ್ತ್ರ, ಆರತಕ್ಷತೆ ಕಾರ್ಯಕ್ರಮ ಮಾಡುತ್ತಿದ್ದರು. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಾಣಧಿಕಾರಿ ಅನಿತಾಲಕ್ಷ್ಮೀ ದಾಳಿ ನಡೆಸಿದ್ದಾರೆ. ಬಾಲ್ಯವಿವಾಹವನ್ನು ತಡೆದು 15 ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿಯನ್ನು ಸದ್ಯ ಮಹಿಳಾ ಕೇಂದ್ರಕ್ಕೆ ಕರೆತರಗಾದೆ. ಪೋಷಕರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.