ಮಕ್ಕಳ ಶಿಕ್ಷಣ ಈಗ ಸುಲಭವಾಗಿ ಸಿಗ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗ್ತಿದೆ. ಮಕ್ಕಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಪಾಲಕರು, ಇತ್ತೀಚಿನ ದಿನಗಳಲ್ಲಿ ಮಕ್ಕಳ ವಿಮೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಮಕ್ಕಳ ಹೆಸರಿನಲ್ಲಿ ವಿಮೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳಿಗೆ ವಿಮೆ ತೆಗೆದುಕೊಳ್ಳುವ ಮೊದಲು ಕೆಲವೊಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಮೂಳೆಗಳ ಆರೋಗ್ಯ ವೃದ್ಧಿಸಿಕೊಳ್ಳಲು ಹೀಗೆ ಮಾಡಿ
ಅನೇಕ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಮಕ್ಕಳ ವಿಮೆ ಅಥವಾ ಮಕ್ಕಳ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಕೆಲವು ತಪ್ಪುಗಳಿಂದಾಗಿ, ಅವರು ಕಡಿಮೆ ಆದಾಯ ಪಡೆಯುತ್ತಾರೆ. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹೂಡಿಕೆ ಮಾಡುವ ಪಾಲಕರು 10-15 ವರ್ಷ ಮೊದಲೇ ಹೂಡಿಕೆ ಶುರು ಮಾಡಬೇಕು.
ಪಾಲಿಸಿ ಖರೀದಿ ಮೊದಲು ನಮ್ಮ ಸಾಮರ್ಥ್ಯದ ಬಗ್ಗೆ ನಿರ್ಧರಿಸಬೇಕು. ದೀರ್ಘಕಾಲದ ಹೂಡಿಕೆಯಾದ್ದರಿಂದ ಹೂಡಿಕೆ ಮಾಡುವ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ನಿರ್ಧರಿಸಿ ಪಾಲಿಸಿ ಖರೀದಿ ಮಾಡಬೇಕಾಗುತ್ತದೆ. ಹಣದುಬ್ಬರವನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು. ಈಗ 10 ಲಕ್ಷಕ್ಕೆ ಸಿಗ್ತಿರುವ ಉನ್ನತ ಶಿಕ್ಷಣ ಇನ್ನು 10 ವರ್ಷದಲ್ಲಿ 21 ಲಕ್ಷವಾಗಬಹುದು. ಅದನ್ನು ಗಮದಲ್ಲಿಟ್ಟುಕೊಂಡು ಹೂಡಿಕೆ ಮಾಡಬೇಕಾಗುತ್ತದೆ.
ಹೂಡಿಕೆ ದುಪ್ಪಟ್ಟಾಗುವ ಅವಧಿ ಲೆಕ್ಕ ಹಾಕುತ್ತಿದ್ದೀರಾ..? ಇಲ್ಲಿದೆ ರೂಲ್ 72 ರ ಕುರಿತ ಮಾಹಿತಿ
ಮಕ್ಕಳ ಹೆಸರಿನಲ್ಲಿ ವಿಮೆ ಪಡೆಯುವ ಮೊದಲು ಪಾಲಕರು ವಿಮೆ ಪಡೆಯಬೇಕು. ಪಾಲಕರು ಸಾವನ್ನಪ್ಪಿದ್ರೆ ಇಡೀ ಕುಟುಂಬಕ್ಕೆ ಆರ್ಥಿಕ ನೆರವು ಸಿಗಬಲ್ಲ ವಿಮೆ ಖರೀದಿ ಮಾಡಬೇಕು. ಅದಾದ ನಂತ್ರವೇ ಮಕ್ಕಳ ವಿಮೆ ಖರೀದಿ ಆಡಬೇಕು.
15 ವರ್ಷಕ್ಕೆ ನಿಮಗೆ ಹಣ ಕೈಗೆ ಸಿಗಬೇಕೆಂದ್ರೆ 15 ವರ್ಷದ ಯೋಜನೆಯಲ್ಲಿಯೇ ಹೂಡಿಕೆ ಮಾಡಿ. ಯಾವುದೇ ಕಾರಣಕ್ಕೂ ಹೆಚ್ಚಿನ ಅಥವಾ ಕಡಿಮೆ ಅವಧಿಯ ಹೂಡಿಕೆ ಮಾಡಬೇಡಿ.
ಹೂಡಿಕೆ ವಿಳಂಬ ಕೂಡ ಮಾಡಬೇಡಿ. ಸಾಮಾನ್ಯವಾಗಿ ಹೂಡಿಕೆ ಬಗ್ಗೆ ಆಲೋಚನೆ ಮಾಡುವ ಜನರು ಹೂಡಿಕೆ ಮಾಡಲು ಮುಂದಾಗುವುದಿಲ್ಲ. ಇದ್ರಿಂದ ನಷ್ಟ ನಮಗಾಗುತ್ತದೆ. ಹೂಡಿಕೆ ವಿಳಂಬವಾದಷ್ಟು ರಿಟರ್ನ್ ಕಡಿಮೆ ಬರುತ್ತದೆ ಎಂಬುದು ನೆನಪಿರಲಿ.