ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆ ಕಚೇರಿಗಳು ಹಾಗು ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೋಡ್‌ಗೆ ಮರಳುತ್ತಿವೆ. ಕೋವಿಡ್ ಸೋಂಕಿನ ನಿದರ್ಶನದೊಂದಿಗೆ ನ್ಯೂಟನ್‌ನ ನಾಲ್ಕನೇ ನಿಯಮ ವಿವರಿಸಲು ಹುಡುಗನೊಬ್ಬ ಮುಂದಾಗಿದ್ದಾನೆ.
“ನ್ಯೂಟನ್‌ನ ನಾಲ್ಕನೇ ನಿಯಮ: ಕೊರೋನಾ ಹೆಚ್ಚಿದಾಗ ಓದು ಕಡಿಮೆಯಾಗುತ್ತದೆ. ಕೊರೋನಾ ಕಡಿಮೆಯಾದಾಗ ಅಧ್ಯಯನ ಹೆಚ್ಚುತ್ತದೆ. ಇದರರ್ಥ ಕೊರೋನಾವು ಅಧ್ಯಯನಕ್ಕೆ ಹಿಮ್ಮುಖವಾಗಿ ಅನುಪಾತ ಹೊಂದಿದೆ,’’ ಎಂದು ಬಾಲಕ ಬರೆದಿರುವುದನ್ನು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಅವನಿಶ್ ಶರಣ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಾಯಿ, ಮಗಳು ನೇಣಿಗೆ ಶರಣು
ಕೊರೋನಾ ಹಾಗೂ ಅಧ್ಯಯನದ ನಡುವಿನ ಪರಸ್ಪರ ಸಂಬಂಧವನ್ನು ವಿಶ್ಲೇಷಿಸಲು ಅನುಪಾತವೊಂದನ್ನು ಸಹ ವಿದ್ಯಾರ್ಥಿ ಬಳಸಿದ್ದಾನೆ. “ಈತ ಕೋವಿಡ್ ಕಾಲದ ನ್ಯೂಟನ್” ಎಂದು ಅವನಿಶ್ ಈ ಪೋಸ್ಟ್‌ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.