
ಬೆಂಗಳೂರು: ರಿವರ್ಸ್ ತೆಗೆಯುವಾಗ ಟ್ರ್ಯಾಕ್ಟರ್ ಹಿಂಬದಿ ಚಕ್ರ ಹರಿದು ಆಟವಾಡುತ್ತಿದ್ದ ಮಗು ಮೃತಪಟ್ಟ ಘಟನೆ ಕೆಆರ್ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನಂದಪುರ ನಿವಾಸಿ ಡಿಯಾನ್ ಪ್ರಜ್ವಲ್(4) ಮೃತಪಟ್ಟ ಮಗು ಎಂದು ಹೇಳಲಾಗಿದೆ. ಟ್ರ್ಯಾಕ್ಟರ್ ಚಾಲಕ ವಿಶ್ವನಾಥ್ ನನ್ನು ಬಂಧಿಸಲಾಗಿದೆ. ಶನಿವಾರ ಬೆಳಗ್ಗೆ ಆನಂದಪುರ ಐದನೇ ಕ್ರಾಸ್ ರಸ್ತೆಯಲ್ಲಿ ಮನೆ ಮುಂದೆ ಪ್ರಜ್ವಲ್ ಆಟವಾಡುತ್ತಿದ್ದ ಸಂದರ್ಭದಲ್ಲಿ ವಿಶ್ವನಾಥ್ ಟ್ಯಾಕ್ಟರ್ ಅನ್ನು ರಿವರ್ಸ್ ತೆಗೆಯುತ್ತಿದ್ದ. ಟ್ರ್ಯಾಕ್ಟರ್ ನ ಹಿಂದಿನಿಂದ ಡಿಕ್ಕಿ ಹೊಡೆದು ಚಕ್ರಗಳು ಆತನ ಮೇಲೆ ಹರಿದಿವೆ. ಸ್ಥಳದಲ್ಲೇ ಮಗು ಮೃತಪಟ್ಟಿದೆ.