ಬೆಂಗಳೂರು: ಕ್ಯಾಂಟರ್ ರಿವರ್ಸ್ ತೆಗೆಯುವ ವೇಳೆ 13 ತಿಂಗಳ ಮಗು ಮೃತಪಟ್ಟ ಘಟನೆ ನಡೆದಿದೆ. ಮೋನಿಕಾ ದೇವಿ ಮೃತಪಟ್ಟ ಮಗು ಎಂದು ಹೇಳಲಾಗಿದೆ.
ಸರ್ಜಾಪುರ ಗೋಣಿಘಟ್ಟಪುರದ ಇಟ್ಟಿಗೆ ಕಾರ್ಖಾನೆ ಶೇಡ್ ಬಳಿ ಶುಕ್ರವಾರ ಘಟನೆ ನಡೆದಿದೆ. ತಂದೆ ಬಾಲಕೃಷ್ಣ ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದು, ಮಗಳು ಮನೆಯ ಮುಂದೆ ಆಟವಾಡುವುದನ್ನು ಗಮನಿಸದೇ ಇಟ್ಟಿಗೆ ತುಂಬಿದ್ದ ಕ್ಯಾಂಟರ್ ರಿವರ್ಸ್ ತೆಗೆದುಕೊಳ್ಳುವಾಗ ಮಗುವಿನ ತಲೆಗೆ ವಾಹನ ಹಿಂಬದಿ ತಾಗಿ ತೀವ್ರ ರಕ್ತಸ್ರಾವವಾಗಿದೆ.
ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.