
ಕುಷ್ಟಗಿ: ಗಂಟಲಲ್ಲಿ ಗಾಜಿನ ಬಾಟಲಿ ಮುಚ್ಚಳ ಸಿಲುಕಿ ಎರಡು ವರ್ಷದ ಮಗು ಮೃತಪಟ್ಟ ಘಟನೆ ಕುಷ್ಟಗಿಯ ಮದೀನಾ ಗಲ್ಲಿಯಲ್ಲಿ ನಡೆದಿದೆ.
ರಬ್ಬಾನಿ ಬಾಗೇವಾಡಿ ಅವರ ಮಗ ಮೊಹಮ್ಮದ್ ರಬ್ಬಾನಿ ಬಾಗೇವಾಡಿ ಮೃತಪಟ್ಟ ಮಗು. ಸಿಹಿ ತಿಂಡಿಯ ಬಾಟಲಿ ಮುಚ್ಚಳ ಬಾಯಿಯಲ್ಲಿ ಸಿಲುಕಿದ್ದು, ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅನ್ನನಾಳದಲ್ಲಿ ಬಾಟಲಿ ಅಡ್ಡ ಸಿಲುಕಿದೆ. ತೀವ್ರ ಅಸ್ವಸ್ಥಗೊಂಡಿದೆ. ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದೆ ಎನ್ನಲಾಗಿದೆ.