ಮಕ್ಕಳು ಕರುಂ ಕುರುಂ ತಿಂಡಿ ಮೇಲೆ ಹೆಚ್ಚು ಆಕರ್ಷಿತರಾಗುತ್ತಾರೆ. ಚಕ್ಲಿ, ಕೋಡುಬಳೆ, ನಿಪ್ಪಟ್ಟು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಸವಿಯುತ್ತಾರೆ.
ಹಾಗೆ ವಿವಿಧ ಬಗೆಯ ಉಂಡೆಗಳನ್ನು ತಿನ್ನುವ ಮಕ್ಕಳಿಗೆ ಹುರಿಗಡಲೆ ಬಳಸಿ ಸುಲಭವಾಗಿ ಉಂಡೆಗಳನ್ನು ತಯಾರಿಸಿ ಕೊಡಬಹುದು. ಸಿಂಪಲ್ಲಾಗಿ ಹುರಿಗಡಲೆ ಉಂಡೆ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಹುರಿಗಡಲೆ – ನಾಲ್ಕು ಕಪ್
ಬೆಲ್ಲದ ತುರಿ – ಎರಡು ಕಪ್
ತುಪ್ಪ ಅಗತ್ಯವಿರುವಷ್ಟು
ಏಲಕ್ಕಿ ಪುಡಿ – ಅರ್ಧ ಚಮಚ
ಮಾಡುವ ವಿಧಾನ
ದಪ್ಪ ತಳ ಹೊಂದಿರುವ ಪಾತ್ರೆಯನ್ನು ತೆಗೆದುಕೊಂಡು ಅದರೊಳಗೆ ಬೆಲ್ಲವನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ, ಬೆಲ್ಲ ಪಾಕ ಬರುವ ತನಕ ಕಾಯಿಸಬೇಕು. ಇದಕ್ಕೆ ಹುರಿಗಡಲೆ, ಏಲಕ್ಕಿಪುಡಿ ಕೊನೆಯಲ್ಲಿ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣವಾಗುವಂತೆ ತಿರುಗಿಸಬೇಕು.
ಮಿಶ್ರಣ ಅಂಟು ಅಂಟಾದ ಮೇಲೆ ಒಲೆಯಿಂದ ಕೆಳಗಿಳಿಸಿ ಸ್ವಲ್ಪ ಬಿಸಿ ಕಡಿಮೆಯಾದ ನಂತರ ಕೈಯಿಂದ ಉಂಡೆಗಳನ್ನು ಮಾಡಬೇಕು. ಈಗ ಹುರಿಗಡಲೆ ಉಂಡೆ ತಿನ್ನಲು ಸಿದ್ಧ.