ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಕಾರ್ಯಾಲಯದಲ್ಲಿಯೇ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸಚಿವ ಕೆ.ಜೆ.ಜಾರ್ಜ್ ಅವರ ಆಪ್ತ ಸಹಾಯಕ ಮೊಗಣ್ಣ ಅವರ ಬ್ಯಾಗ್ ಕಳ್ಳತನಾಗಿದೆ. ಚಿಕ್ಕಮಗಳೂರಿನ ಕಾರ್ಯಾಲಯದ ಕಚೇರಿಯಲ್ಲಿ ಬ್ಯಾಗ್ ಇಟ್ಟು ಹೊರಹೋಗಿ ಬರುವಷ್ಟರಲ್ಲಿ ಬ್ಯಾಗ್ ನಾಪತ್ತೆಯಾಗಿದೆ.
ಬ್ಯಾಗ್ ನಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದ ಪ್ರಮುಖ ಫೈಲ್ ಗಳು, 15 ಸಾವಿರ ರೂಪಾಯಿ ಹಣವಿತ್ತು ಎಂದು ತಿಳಿದುಬಂದಿದೆ. ಈ ಕುರಿತು ಸಚಿವರ ಆಪ್ತ ಸಹಾಯಕ ಮೊಗಣ್ಣ ಮಾಹಿತಿ ನೀಡಿದ್ದು, ಬ್ಯಾಗ್ ಟೇಬಲ್ ಮೇಲೆ ಇಟ್ಟು ಹೋಗಿ ಬರುವಷ್ಟರಲ್ಲಿ ಬ್ಯಾಗ್ ಕಳ್ಳತನಾಗಿದೆ. ಯಾರು ಈ ಕೃತ್ಯವೆಸಗಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.