
ಚಿಕ್ಕಮಗಳೂರು: ವಾಮಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಭಕ್ತರಹಳ್ಳಿಯಲ್ಲಿ ನಡೆದಿದೆ.
ಡೆತ್ ನೋಟ್ ಬರೆದಿಟ್ಟು ಜಯಂತಿ (29) ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಂತಿ ವಿರುದ್ಧ ಗ್ರಾಮದ ಇಬ್ಬರು ಮಾಟಮಂತ್ರ ಮಾಡಿದ್ದ ಆರೋಪ ಮಾಡಿದ್ದರು. 10 ವರ್ಷಗಳ ಹಿಂದೆ ಜಯಂತಿ ಮಂಜುನಾಥ್ ಎಂಬಾತನನ್ನು ವಿವಾಹವಾಗಿದ್ದರು.
ಹಾಸನ ಜಿಲ್ಲೆಯ ಬೇಲೂ ತಾಲೂಕಿನ ತಿಮ್ಮೇನಹಳ್ಲಿ ಮೂಲದ ಜಯಂತಿ ಚಿಕ್ಕಮಗಳೂರಿನ ಮಂಜುನಾಥ್ ಅವರನ್ನು ವಿವಾಹವಾಗಿದ್ದರು. ಇದೀಗ ಗ್ರಾಮದ ಇಬ್ಬರಿಂದ ವಾಮಾಚಾರ ಎಂದು ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಲುರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.