![](https://kannadadunia.com/wp-content/uploads/2023/07/police-crime.png)
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಕೋಮಿನ ಆರು ಜನ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರಿನ ಬಸವನಹಳ್ಳಿ ಠಾಣೆ ಪೊಲೀಸರು ಅಪ್ರಾಪ್ತರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ರಾಮನಹಳ್ಳಿ ಸಮೀಪ ಖಬರಸ್ಥಾನದಿಂದ ರಾತ್ರಿ ವಾಪಸ್ ಬರುವಾಗ ಪರಸ್ಪರ ಬಾಲಕರು ಕಲ್ಲು ತೂರಿಕೊಂಡಿದ್ದಾರೆ. ಇದೇ ವೇಳೆ ಉಮೇಶ್ ಎಂಬುವರ ಮನೆ ಮೇಲೆ ಕಲ್ಲು ಬಿದ್ದಿವೆ. ಮನೆಯ ಮೇಲೆ ಕಲ್ಲು ಬೀಳುತ್ತಿದ್ದಂತೆ ಬಾಲಕರು ಓಡಿ ಹೋಗಿದ್ದಾರೆ ಎಂದು ಪೊಲೀಸರ ಮುಂದೆ ಅಪ್ರಾಪ್ತ ಬಾಲಕರು ಹೇಳಿಕೆ ನೀಡಿದ್ದಾರೆ. 189(2), 189(4) ಸೇರಿ ಹಲವು ಸೆಕ್ಷನ್ ಗಳಡಿ ಕೇಸ್ ದಾಖಲಾಗಿದೆ. ಪೊಲೀಸ್ ವಿಚಾರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.