alex Certify BREAKING NEWS: ಕರ್ನಾಟಕದ ಇತಿಹಾಸದಲ್ಲಿಯೇ ನಕ್ಸಲರ ಅತಿದೊಡ್ದ ಶರಣಾಗತಿ: ಕೆಲವೇ ಕ್ಷಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ನಕ್ಸಲರು ಸರೆಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕರ್ನಾಟಕದ ಇತಿಹಾಸದಲ್ಲಿಯೇ ನಕ್ಸಲರ ಅತಿದೊಡ್ದ ಶರಣಾಗತಿ: ಕೆಲವೇ ಕ್ಷಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ನಕ್ಸಲರು ಸರೆಂಡರ್

ಚಿಕ್ಕಮಗಳೂರು: ಕರ್ನಾಟಕದ ಇತಿಹಾಸದಲ್ಲಿಯೇ ಇಂದು ಅತಿದೊಡ್ಡ ಮಟ್ಟದಲ್ಲಿ ನಕ್ಸಲರು ಶರಣಾಗತರಾಗಲಿದ್ದಾರೆ. 24 ವರ್ಷಗಳ ಬಳಿಕ 6 ನಕ್ಸಲರು ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ನಿರ್ಧರಿಸಿದ್ದಾರೆ.

ಚಿಕ್ಕಮಗಳೂರು ಅರಣ್ಯದಲ್ಲಿ ಅಡಗಿರುವ ಮೋಸ್ಟ್ ವಾಂಟೆಡ್ 6 ನಕ್ಸಲರು ಕೆಲವೇ ಕ್ಷಣಗಳಲ್ಲಿ ಜಿಲ್ಲಾಡಳಿತದ ಮುಂದೆ ಶರಣಾಗುತ್ತಿದ್ದು, ಈಗಾಗಲೇ ಕಾಡಿನಿಂದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರೊಂದಿಗೆ 6 ನಕ್ಸಲರು ಜಿಲ್ಲಡಳಿತದತ್ತ ಆಗಮಿಸುತ್ತಿದ್ದಾರೆ.

ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಹಾಗೂ ಶಾಂತಿಗಾಗಿ ನಗರಿಕ ವೇದಿಕೆ ಹಾಗೂ ನಕ್ಸಲರ ನಡುವಿನ ಮಾತುಕತೆ ಪ್ರಕ್ರೊಯೆ ಪೂರ್ಣಗೊಂಡಿದ್ದು, ಬೆಳಿಗ್ಗೆ 11 ಗಂತೆಗೆ 6 ನಕ್ಸಲರು ಶರಣಾಗತರಾಗಲಿದ್ದಾರೆ.

ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ 6 ನಕ್ಸಲರಾದ ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ತಮಿಳುನಾಡಿನ ಕೆ ವಸಂತ ಅಲಿಯಾಸ್ ರಮೇಶ್, ಕೇರಳದ ಜೀಶ, ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಶರಣಾಗತರಾಗುವ ನಕ್ಸಲರು. ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್ ಪ್ರಕರಣದ ಬಳಿಕ ಆತನ ಅನುಯಾಯಿಗಳಾಗಿದ್ದ ನಕ್ಸಲರಿಗೆ ಶರಣಾಗುವಂತೆ ಸರ್ಕಾರ ಸೂಚನೆ ನೀಡಿತ್ತು. ಶರಣಾದ ನಕ್ಸಲರಿಗೆ ಆರ್ಥಿಕ, ಸಾಮಾಜಿಕ ನೆರವು, ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ 6 ನಕ್ಸಲರು ಶರಣಾಗಲು ನಿರ್ಧರಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...