ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ತಾಯಿ ಕೊಲೆಗೈದ ಪುತ್ರ ಹೈಡ್ರಾಮಾ ಮಾಡಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಹಚ್ಚಡಮನೆ ಗ್ರಾಮದಲ್ಲಿ ನಡೆದಿದೆ.
ಲತಾ ಕೊಲೆಯಾದವರು. ಒಲೆ ಊದುವ ಕೊಳವೆಯಿಂದ ಲತಾ ಅವರ ತಲೆಗೆ ಹೊಡೆದು ಕೊಲೆ ಮಾಡಿದ ಪುತ್ರ ಬಸವರಾಜನ ಕೃತ್ಯ ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.
ಬಸವರಾಜ ತಾಯಿಯನ್ನು ಕೊಂದು ಡೀಸೆಲ್ ಹಾಕಿ ಮೃತದೇಹ ಸುಟ್ಟುಹಾಕಿದ್ದ. ಮಲಗಿದ್ದ ವೇಳೆ ಮೇಣದಬತ್ತಿಯ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರನ್ನು ನಂಬಿಸಿ ತರಾತುರಿಯಲ್ಲಿ ಶವ ಸಂಸ್ಕಾರ ನೆರವೇರಿಸಿದ್ದ. ಜುಲೈ 18 ರಂದು ನಡೆದ ಘಟನೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಪೊಲೀಸರ ತನಿಖೆಯ ವೇಳೆ ಪುತ್ರನೇ ತಾಯಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆಲ್ದೂರು ಠಾಣೆ ಪೊಲೀಸರು ಆರೋಪಿ ಬಸವರಾಜನನ್ನು ಬಂಧಿಸಿದ್ದಾರೆ.