ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಚಿಕ್ಕಮಗಳೂರು ಜಿಲ್ಲೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದೇವಿರಮ್ಮನ ಸನ್ನಿಧಾನಕ್ಕೆ ಜನಸಾಗರವೇ ಹರಿದು ಬಂದಿದೆ.
ಮೈ ಕೊರೆಯುವ ಚಳಿಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ದೇವಿಯ ದರ್ಶನ ಪಡೆದಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮೊದಲಾದವರು ಸಹ ಬೆಟ್ಟವೇರಿ ದರ್ಶನ ಪಡೆದಿದ್ದಾರೆ.
ಲಕ್ಷಾಂತರ ಭಕ್ತರು ರಾತ್ರಿಯಿಂದಲೇ ಬರಿಗಾಲಿನಲ್ಲಿ ಬೆಟ್ಟವೇರಲು ಆರಂಭಿಸಿದ್ದು, ಮಲ್ಲೇನಹಳ್ಳಿ, ಮಾಣಿಕ್ಯಧಾರ, ಅರಿಶಿನ ಕೊಪ್ಪ ಮಾರ್ಗವಾಗಿ ಬೆಟ್ಟದ ಮೇಲೇರಿ ದೇವಿಯ ದರ್ಶನ ಪಡೆದರು.